ಶನಿವಾರ, ಮೇ 28, 2022
31 °C

ಡಬ್ಲ್ಯುಟಿಟಿ ಕಂಟೆಂಡರ್‌: ಸತ್ಯನ್–ಹರ್ಮೀತ್‌ಗೆ ಡಬಲ್ಸ್‌ ಗರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟ್ಯೂನಿಸ್‌, ಟ್ಯೂನಿಷಿಯಾ: ಭಾರತದ ಜಿ.ಸತ್ಯನ್ ಹಾಗೂ ಹರ್ಮೀತ್ ದೇಸಾಯಿ ಅವರು ಇಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಇಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿಯು 11-9, 4-11, 11-9, 11-6ರಿಂದ ಫ್ರಾನ್ಸ್‌ನ ಇಮ್ಯಾನ್ಯುಯೆಲ್‌ ಲೆಬೆಸನ್‌ ಮತ್ತು ಅಲೆಕ್ಸಾಂಡರ್‌ ಕ್ಯಾಸಿನ್ ಅವರನ್ನು ಪರಾಭವಗೊಳಿಸಿದರು.

ಅಂತರರಾಷ್ಟ್ರೀಯ ಪ್ರೊ ಟೂರ್‌ನಲ್ಲಿ ಸತ್ಯನ್‌– ಹರ್ಮೀತ್ ಜೋಡಿಗೆ ಒಲಿದ ಮೊದಲ ಪ್ರಶಸ್ತಿ ಇದು. ಮೊದಲ ಗೇಮ್ ಗೆದ್ದ ಇವರಿಬ್ಬರು ಎರಡನೇ ಗೇಮ್‌ಅನ್ನು ಭಾರೀ ಅಂತರದಿಂದ ಎದುರಾಳಿಗೆ ಒಪ್ಪಿಸಿದರು. ಆದರೆ ಮೂರು ಮತ್ತು ನಾಲ್ಕನೇ ಗೇಮ್‌ಗಳಲ್ಲಿ ಲಯಕ್ಕೆ ಮರಳಿ ಜಯ ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ ಪಂದ್ಯದಲ್ಲೂ ಜಿದ್ದಾಜಿದ್ದಿ ಪೈಪೋಟಿ ನಡೆಸಿದ್ದ ಸತ್ಯನ್–ಹರ್ಮೀತ್‌ 8-11, 12-14, 11-9, 11-8, 11-9ರಿಂದ ಹಂಗರಿಯ ನ್ಯಾಂದೊರ್‌ ಎಕ್ಸೆಕಿ ಮತ್ತು ಆ್ಯಡಂ ಜುಡಿ ಅವರನ್ನು ಮಣಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು