ಶನಿವಾರ, ಜೂನ್ 6, 2020
27 °C

ಅಭ್ಯಾಸ ಆರಂಭಿಸಿದ ಗಾಲ್ಫರ್‌ಗಳು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ ಕಾರಣ ಗಾಲ್ಫ್‌ ಕೋರ್ಸ್‌ಗಳಿಂದ ದೂರ ಉಳಿದಿದ್ದ ಭಾರತದ ಪ್ರಮುಖ ಗಾಲ್ಫರ್‌ಗಳು ಗುರುವಾರ ಅಭ್ಯಾಸ ಆರಂಭಿಸಿದ್ದಾರೆ.

ಶಿವ ಕಪೂರ್‌ ಅವರು ತಮ್ಮ ಸ್ನೇಹಿತ ಗೌರವ್‌ ಘೆಯಿ ಜೊತೆ ದೆಹಲಿ ಗಾಲ್ಫ್‌ ಕ್ಲಬ್‌ನಲ್ಲಿ ಕ್ಯಾಡಿಗಳಿಲ್ಲದೇ ಅಭ್ಯಾಸ ನಡೆಸಿದರು.

ಮುಖಗವಸು ಧರಿಸಿದ್ದ ಇಬ್ಬರೂ, ಕೈಕುಲುಕುವ ಗೋಜಿಗೆ ಹೋಗಲಿಲ್ಲ.

ಮತ್ತೊಬ್ಬ ಗಾಲ್ಫರ್‌ ಜೀವ್‌ ಮಿಲ್ಖಾ ಸಿಂಗ್‌ ಅವರು ಉತ್ತಮ್‌ ಸಿಂಗ್‌ ಮುಂಡೆ, ಗುರ್ಬಾಜ್‌ ಮಾನ್‌, ಅಜಿತೇಶ್‌ ಸಂಧು ಅವರೊಂದಿಗೆ ಚಂಡೀಗಡ ಗಾಲ್ಫ್‌ ಕ್ಲಬ್‌ನಲ್ಲಿ ತಾಲೀಮು ನಡೆಸಿದರು. ಜೀವ್‌ ಅವರ ಕೋಚ್‌ ಅಮರಿಂದರ್‌ ಸಿಂಗ್‌ ಕೂಡ ಜೊತೆಗಿದ್ದರು.

ಶುಭಾಂಕರ್‌ ಶರ್ಮಾ, ಕರಣ್‌ದೀಪ್‌ ಕೊಚ್ಚಾರ್‌, ರೋಹನ್‌ ಖಾತುರಿಯಾ ಅವರೂ ಹೊಸ ನಿಯಮಾವಳಿಗಳ ಅನುಸಾರ ಅಭ್ಯಾಸ ಮಾಡಿದರು.

‘ಎರಡು ತಿಂಗಳ ಬಳಿಕ ಅಭ್ಯಾಸ ನಡೆಸಿದ್ದು ಖುಷಿ ನೀಡಿದೆ. ಗಾಲ್ಫ್‌ ಕ್ಲಬ್‌ ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಿದ್ದೆವು. ಅಂತರ ಕಾಪಾಡಿಕೊಂಡು ಅಭ್ಯಾಸ ನಡೆಸಿದೆವು. ನನ್ನ ತಂದೆ ಮಿಲ್ಖಾ ಸಿಂಗ್‌ ಅವರು ಅಭ್ಯಾಸಕ್ಕೆ ಬರಲಿಲ್ಲ. ಅವರ ಅನುಪಸ್ಥಿತಿ ಕಾಡಿತು’ ಎಂದು 48 ವರ್ಷ ವಯಸ್ಸಿನ ಜೀವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು