ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಆರ್ಚರಿ: ಭಾರತ ಶುಭಾರಂಭ

Last Updated 25 ನವೆಂಬರ್ 2019, 19:33 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ನಿಖರ ಗುರಿಯೊಂದಿಗೆ ಗಮನ ಸೆಳೆದ ಭಾರತದ ಬಿಲ್ಗಾರರು ಇಲ್ಲಿ ಸೋಮವಾರ ಆರಂಭಗೊಂಡ ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಭಾರತದ ಆರ್ಚರಿ ಫೆಡರೇಷನ್‌ನಿಂದ ಅಮಾನತಿಗೆ ಒಳಗಾಗಿರುವ ಬಿಲ್ಗಾರರು ಭಾರತದ ಧ್ವಜದ ಅಡಿಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೂ ಅಮೋಘ ಸಾಮರ್ಥ್ಯ ತೋರಿದರು. ರಿಕರ್ವ್ ಮಿಶ್ರ ವಿಭಾಗದಲ್ಲಿ ಅತನು ದಾಸ್ ಮತ್ತು ದೀಪಿಕಾ ಕುಮಾರಿ ಜೋಡಿ ಚೀನಾದ ಯಿಚಾಯ್ ಜೆಂಗ್ ಮತ್ತು ಶಾಕ್ಸಾನ್ ವೀ ಅವರನ್ನು 6–2ರಲ್ಲಿ ಮಣಿಸಿ ಕಂಚು ಗಳಿಸಿದರು.

ಕಾಂಪೌಂಡ್‌ ಮಿಶ್ರ ವಿಭಾಗದಲ್ಲಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆಣ್ಣಮ್‌ ಅವರು ಕೊರಿಯಾ ಜೋಡಿ ಎದುರು 159–154ರ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನ ಸ್ಪರ್ಧೆ ಬುಧವಾರ ನಡೆಯಲಿದ್ದು ಭಾರತದ ಜೋಡಿ ಚೀನಾ ತೈಪೆಯನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT