ಅಬುಧಾಬಿ ಮಾಸ್ಟರ್ಸ್‌ ಚೆಸ್ ಟೂರ್ನಿ: ಮುನ್ನಡೆ ಕಾಯ್ದುಕೊಂಡ ಗುಕೇಶ್‌

7

ಅಬುಧಾಬಿ ಮಾಸ್ಟರ್ಸ್‌ ಚೆಸ್ ಟೂರ್ನಿ: ಮುನ್ನಡೆ ಕಾಯ್ದುಕೊಂಡ ಗುಕೇಶ್‌

Published:
Updated:

ಅಬುಧಾಬಿ : ಭಾರತದ ಡಿ.ಗುಕೇಶ್‌ ಇಲ್ಲಿ ನಡೆಯುತ್ತಿರುವ ಅಬುಧಾಬಿ ಮಾಸ್ಟರ್ಸ್‌ ಚೆಸ್ ಟೂರ್ನಿಯಲ್ಲಿ ಅಮೋಘ ಓಟ ಮುಂದುವರಿಸಿದ್ದಾರೆ. ಶುಕ್ರವಾರ ಮೂರನೇ ಸುತ್ತಿನಲ್ಲಿ ಗ್ರ್ಯಾಂಡ್‌ಮಾಸ್ಟರ್‌, ರೊಮೇನಿಯಾದ ಮಿರ್ಸಿ ಎಮಿಲಿಯನ್‌ ಅವರೊಂದಿಗೆ ಡ್ರಾ ಸಾಧಿಸಿದ ಅವರು ಅಗ್ರ ಸ್ಥಾನ ಉಳಿಸಿಕೊಂಡರು.

ಪಂದ್ಯದ ಆರಂಭದಲ್ಲಿ ರೊಮೇನಿಯಾದ ಆಟಗಾರ ಮುನ್ನಡೆ ಸಾಧಿಸಿದ್ದರು. ಆದರೆ ನಿಧಾನವಾಗಿ ಲಯ ಕಂಡುಕೊಂಡ ಗುಕೇಶ್‌ ಹಿಡಿತ ಸಾಧಿಸಿದರು. ಕೊನೆಯಲ್ಲಿ ಎದುರಾಳಿ ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರು.

ಎರಡನೇ ಸುತ್ತಿನಲ್ಲಿ ಸೋತಿದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್ ಅಭಿಜೀತ್ ಗುಪ್ತಾ ಮೂರನೇ ಸುತ್ತಿನಲ್ಲಿ ಮಿಥಾಲಿ ಅಜಗಾಂವ್ಕರ್ ಅವರನ್ನು ಮಣಿಸಿದರು. ಗ್ರ್ಯಾಂಡ್‌ಮಾಸ್ಟರ್‌ ಎಸ್‌.ಎಲ್‌.ನಾರಾಯಣ ಅವರನ್ನು ಚೀನಾದ ವಾಂಗ್ ಹಾ ಮಣಿಸಿದರು. ಅರವಿಂದ್‌ ಚಂದಂಬರಂ ರಷ್ಯಾದ ವ್ಲಾದಿಮಿರ್ ಫೆಡೊಸೀವ್ ಅವರ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !