7

ಚಿನ್ನಕ್ಕೆ ಮುತ್ತಿಟ್ಟ ದೀಪಾ ಕರ್ಮಾಕರ್

Published:
Updated:

ನವದೆಹಲಿ: ದೀರ್ಘ ವಿಶ್ರಾಂತಿಯ ನಂತರ ಕಣಕ್ಕಿಳಿದ ದೀಪಾ ಕರ್ಮಾಕರ್ ಟರ್ಕಿಯ ಮರ್ಸಿನ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಲೆಂಜ್ ಕಪ್  ಜಿಮ್ನಾಸ್ಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ವಾಲ್ಟ್‌ ವಿಭಾಗದಲ್ಲಿ 14.150 ಪಾಯಿಂಟ್ಸ್‌ಗಳನ್ನು ಕಲೆಹಾಕಿದ ದೀಪಾ ಮೊದಲ ಸ್ಥಾನ ಪಡೆದರು.

ಬ್ಯಾಲೆನ್ಸಿಂಗ್ ಬೀಮ್ ವಿಭಾಗದ ಆರ್ಹತಾ ಸುತ್ತಿನಲ್ಲಿ ಮಿಂಚಿದ ಅವರು ಮೂರನೇ ಸ್ಥಾನ ಪಡೆದರು. ಇದರಲ್ಲಿ 11.850 ಪಾಯಿಂಟ್ಸ್‌ ಗಳಿಸಿ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದಾರೆ. 

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಅವರು ವಾಲ್ಟ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಅದರ ನಂತರ ಅವರು ಎನೆಟ್ರೆರ್ ಕ್ರುಸಿಯೆಟ್ ಲಿಗಮೆಂಟ್ (ಎಸಿಎಲ್) ಗಾಯದಿಂದ ಬಳಲಿದ್ದರು. ಅವರಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ ಚೇತರಿಸಿಕೊಳ್ಳಲು ದೀರ್ಘ ಸಮಯ ತೆಗೆದುಕೊಂಡರು.

ಈಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಅವರು ಸ್ಪರ್ಧಿಸಿರಲಿಲ್ಲ. ಅದರೊಂದಿಗೆ ಇನ್ನೂ ಕೆಲವು ಮಹತ್ವದ ಟೂರ್ನಿಗಳಿಂದ ದೂರ ಉಳಿದಿದ್ದರು.

ಈ ಟೂರ್ನಿಗೆ  ದೀಪಾ ಅವರೊಂದಿಗೆ ಕೋಚ್ ವಿಶ್ವೇಶ್ವರ್ ನಂದಿ ಕೂಡ ತೆರಳಿದ್ದಾರೆ.

ಮುಂಬರಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿರುವ 10 ಜಿಮ್ನಾಸ್ಟ್‌ಗಳ ಭಾರತ ತಂಡದಲ್ಲಿ ದೀಪಾ ಕರ್ಮಾಕರ್  ಸ್ಥಾನ ಪಡೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !