ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್ ಟೆನಿಸ್‌: ಹಾಸಿನಿಗೆ 2 ಪದಕ

Last Updated 5 ಮೇ 2022, 13:22 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಯುವ ಟೇಬಲ್ ಟೆನಿಸ್ ಆಟಗಾರ್ತಿ ಹಾಸಿನಿ ಮಾಥನ್ ರಾಜನ್ ಅವರು ಆಸ್ಟ್ರಿಯಾದ ಲಿನ್ಸ್‌ನಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ ಯೂತ್ ಕಂಟೆಂಡರ್‌ ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದುಕೊಂಡಿದ್ದಾರೆ.

13 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡ ಅವರು 15 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು. 13 ವರ್ಷದೊಳಗಿನವರ ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ರೊಮೇನಿಯಾದ ಆ್ಯಂಡ್ರಿಯಾ ಬೈಸು ವಿರುದ್ಧ ಹಾಸಿನಿ 11-3, 7-11, 9 -11 ,11-0, 11-8ರಲ್ಲಿ ಜಯ ಗಳಿಸಿದರು.

15 ವರ್ಷದೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾದ ಚೊಯಿ ಹೊಸಿ ವಿರುದ್ಧ 3–0ಯಿಂದ ಹಾಸಿನಿ ಗೆದ್ದರು. ಆದರೆ ಸಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಯೂ ಯೆರಿನ್ ಎದುರು ಸೋತರು. ಫೈನಲ್‌ನಲ್ಲಿ ಯೂ ಯೆರಿನ್ ವಿರುದ್ಧ ಗೆದ್ದ ಲೀ ಸಿಗೆಂಗೆನ್ ‍ಪ್ರಶಸ್ತಿ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT