ಸೋಮವಾರ, ಮೇ 23, 2022
30 °C

ಏಷ್ಯನ್ ಕುಸ್ತಿ: ಕಂಚು ಗೆದ್ದ ಹರಪ್ರೀತ್‌, ಸಚಿನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಉಲಾನ್‌ಬಾತರ್, ಮಂಗೋಲಿಯಾ (ಪಿಟಿಐ): ಸಚಿನ್‌ ಸಹ್ರಾವತ್‌ ಮತ್ತು ಹರ್‌ಪ್ರೀತ್ ಸಿಂಗ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರೀಕೊ ರೋಮನ್ ವಿಭಾಗದಲ್ಲಿ ಬುಧವಾರ ಕಂಚಿನ ಪದಕ ಜಯಿಸಿದ್ದಾರೆ.

ಇದರೊಂದಿಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಐದಕ್ಕೇರಿದೆ.

67 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಚಿನ್‌, ಕಂಚಿನ ಪದಕದ ಬೌಟ್‌ನಲ್ಲಿ 7-3ರಿಂದ ಉಜ್ಬೆಕಿಸ್ತಾನದ ಮಹಮೂದ್‌ ಬಕ್ಷಿಲ್ಲೊವ್ ಅವರನ್ನು ಸೋಲಿಸಿಸಿದರು.

82 ಕೆಜಿ ವಿಭಾಗದಲ್ಲಿ ಹರ್‌ಪ್ರೀತ್ ಸಿಂಗ್ ಸ್ಪರ್ಧಿಸಿದ್ದರು. ಕಂಚಿನ ಪದಕದ ಸುತ್ತಿನಲ್ಲಿ ಅವರ ಎದುರಾಳಿಯಾಗಿದ್ದ ಕತಾರ್‌ನ ಜಾಫರ್‌ ಖಾನ್‌ ಎಂ. ಖಾನ್ ಗಾಯದ ಕಾರಣ ಕಣಕ್ಕಿಳಿಯಲಿಲ್ಲ. ಹೀಗಾಗಿ ಅವರಿಗೆ ಪದಕ ಒಲಿಯಿತು.

ಮಂಗಳವಾರ ಸುನಿಲ್ ಕುಮಾರ್ (87 ಕೆಜಿ), ಅರ್ಜುನ್ ಹಲಕುರ್ಕಿ (55 ಕೆಜಿ) ಮತ್ತು ನೀರಜ್‌ (63 ಕೆಜಿ) ಗ್ರೀಕೊ ರೋಮನ್ ವಿಭಾಗಗಳಲ್ಲೇ ಕಂಚು ಜಯಿಸಿದ್ದರು.

60 ಕೆಜಿ ವಿಭಾಗದ ಕಂಚಿನ ಪದಕದ ಬೌಟ್‌ನಲ್ಲಿ ಜ್ಞಾನೇಂದ್ರ, ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಪಾನ್‌ನ ಆಯಾಟ ಸುಜುಕಿ ಎದುರು ಸೋತರು. ಕ್ವಾರ್ಟರ್‌ಫೈನಲ್‌ಗಳಲ್ಲಿ ವಿಕಾಸ್‌ (72 ಕೆಜಿ) ಉಜ್ಬೆಕಿಸ್ತಾನದ ಮಿರ್ಜಾಬೆಕ್ ರಖ್ಮತೊವ್ ಎದುರು, ರವಿ (97 ಕೆಜಿ) ಅವರು 1–3ರಿಂದ ಕಿರ್ಗಿಸ್ತಾನದ ಯು. ಜುಜುಬೆಕೊವ್ ಎದುರು ನಿರಾಸೆ ಅನುಭವಿಸಿದರು.

ಗುರುವಾರದಿಂದ ಮಹಿಳೆಯರ ಸ್ಪರ್ಧೆಗಳು ಆರಂಭವಾಗಲಿವೆ. ಸರಿತಾ ಮೋರ್‌ ಮತ್ತು ಅನ್ಶು ಮಲಿಕ್‌ ಕಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.