ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಹರಿಕೃಷ್ಣ ಕಣಕ್ಕೆ

Last Updated 12 ಜೂನ್ 2020, 13:59 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಚೆಸೆಬಲ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಆನ್‌ಲೈನ್‌ನಲ್ಲಿ ರ‍್ಯಾಪಿಡ್‌ ಮಾದರಿಯಲ್ಲಿ ನಡೆಯುವ ಈ ಚೆಸ್‌ ಟೂರ್ನಿಗೆ ಈ ತಿಂಗಳ 20ರಂದು ಚಾಲನೆ ಸಿಗಲಿದೆ.

₹1.13 ಕೋಟಿ ಬಹುಮಾನ ಮೊತ್ತದ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌, ಫಾಬಿಯಾನೊ ಕರುವಾನ, ಡಿಂಗ್‌ ಲಿರೆನ್‌, ಹಿಕಾರು ನಕಮುರಾ, ಇಯಾನ್‌ ನೆಪೊಮ್ನಿಯಾಚಿ, ಡೇನಿಯಲ್‌ ಡುಬೊವ್‌, ಮ್ಯಾಕ್ಸಿಮ್‌ ವಚೈರ್‌ ಲಾಗ್ರೇವ್‌, ಅನೀಶ್‌ ಗಿರಿ, ಅಲೆಕ್ಸಾಂಡರ್‌ ಗ್ರಿಸ್‌ಚುಕ್‌, ಟಿಯೆಮೌರ್‌ ರದಜಾಬೊವ್‌ ಮತ್ತು ವ್ಲಾದಿಸ್ಲಾವ್‌ ಅರ್ಟೆಮೀವ್‌ ಅವರೂ ಪಾಲ್ಗೊಳ್ಳಲಿದ್ದಾರೆ.

‘ಮ್ಯಾಗ್ನಸ್‌ ಕಾರ್ಲ್‌ಸನ್‌ ಟೂರ್‌ನ ಭಾಗವಾಗಿರುವ ಚೆಸೆಬಲ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲು ಉತ್ಸುಕನಾಗಿದ್ದೇನೆ. ವಿಶ್ವದ ಪ್ರಮುಖ ಆಟಗಾರರ ವಿರುದ್ಧ ಪೈಪೋಟಿ ನಡೆಸಲು ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಟೂರ್ನಿಯಲ್ಲಿ ಪರಿಣಾಮಕಾರಿ ಆಟ ಆಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಹರಿಕೃಷ್ಣ, ಶುಕ್ರವಾರ ತಿಳಿಸಿದ್ದಾರೆ.

ಶುಕ್ರವಾರದಿಂದ ಆರಂಭವಾಗಿರುವ ಶಾರ್ಜಾ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲೂ ಹರಿಕೃಷ್ಣ ಅವರು ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT