ಬ್ಯಾಡ್ಮಿಂಟನ್‌: ದಾನಿಗೆ ಡಚ್‌ ಓಪನ್‌ ಗರಿ

ಭಾನುವಾರ, ಏಪ್ರಿಲ್ 21, 2019
26 °C

ಬ್ಯಾಡ್ಮಿಂಟನ್‌: ದಾನಿಗೆ ಡಚ್‌ ಓಪನ್‌ ಗರಿ

Published:
Updated:
Prajavani

ನವದೆಹಲಿ: ಆರಂಭಿಕ ನಿರಾಸೆಯಿಂದ ಎದೆಗುಂದದೆ ಕೆಚ್ಚೆದೆಯಿಂದ ಹೋರಾಡಿ ಎದುರಾಳಿಯ ಸದ್ದಡಗಿಸಿದ ಭಾರತದ ಹರ್ಷಿಲ್‌ ದಾನಿ, ಡಚ್‌ ಓಪನ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ನೆದರ್ಲೆಂಡ್ಸ್‌ನ ವಾಟರಿಂಗೆನ್‌ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಹರ್ಷಿಲ್‌ 15–21, 21–12, 21–13ರಲ್ಲಿ ಡೆನ್ಮಾರ್ಕ್‌ನ ಮ್ಯಾಡ್ಸ್‌ ಕ್ರಿಸ್ಟೋಫರ್‌ಸನ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 47 ನಿಮಿಷ ನಡೆಯಿತು.

ಗಾಯದ ಕಾರಣ ಹೋದ ವರ್ಷ ಎಂಟು ತಿಂಗಳು ಬ್ಯಾಡ್ಮಿಂಟನ್‌ ಅಂಗಳದಿಂದ ದೂರ ಉಳಿದಿದ್ದ 22 ವರ್ಷದ ದಾನಿ, ಡಚ್‌ ಓಪನ್‌ನ ಆರಂಭದಿಂದಲೂ ಅತ್ಯುತ್ತಮ ಸಾಮರ್ಥ್ಯ ತೋರಿದ್ದರು.

ಫೈನಲ್‌ ಹೋರಾಟದ ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ ಪರಿಣಾಮಕಾರಿಯಾಗಿ ಆಡಲು ವಿಫಲರಾದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 149ನೇ ಸ್ಥಾನದಲ್ಲಿರುವ ಮ್ಯಾಡ್ಸ್‌, ದ್ವಿತೀಯಾರ್ಧದಲ್ಲಿ ಪ್ರಾಬಲ್ಯ ಮೆರೆದರು.

ಆದರೆ ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ ಲಯ ಕಂಡುಕೊಂಡರು. ಚುರುಕಿನ ಡ್ರಾಪ್‌ ಮತ್ತು ಆಕರ್ಷಕ ಸರ್ವ್‌ಗಳ ಜೊತೆಗೆ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಸಿಡಿಸಿ ಪಾಯಿಂಟ್ಸ್‌ ಕಲೆಹಾಕಿದ ಹರ್ಷಿಲ್‌ ಸುಲಭವಾಗಿ ಮುನ್ನಡೆ ಗಳಿಸಿದರು. ದ್ವಿತೀಯಾರ್ಧದಲ್ಲೂ ಗುಣಮಟ್ಟದ ಆಟ ಆಡಿ ಗೆದ್ದರು.

ಹೀಗಾಗಿ ಮೂರನೇ ಗೇಮ್‌ ಉಭಯ ಆಟಗಾರರ ಪಾಲಿಗೆ ಮಹತ್ವದ್ದೆನಿಸಿತ್ತು. ಗೇಮ್‌ನ ಶುರುವಿನಿಂದಲೇ ಭಾರತದ ಆಟಗಾರ ಚುರುಕಿನ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !