ಹರಿಯಾಣದ ಮುಡಿಗೆ 7 ಚಿನ್ನ

7

ಹರಿಯಾಣದ ಮುಡಿಗೆ 7 ಚಿನ್ನ

Published:
Updated:

ಸೂರತ್‌: ಹರಿಯಾಣ ತಂಡವು ರಾಷ್ಟ್ರೀಯ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಎರಡನೇ ದಿನ ಏಳು ಚಿನ್ನದ ಪದಕಗಳನ್ನು ಗೆದ್ದರು. 

ಭಾನುವಾರ ನಡೆದ ಚಾಂಪಿಯನ್‌ಷಿಪ್‌ ಹತ್ತು ವಿಭಾಗಗಳ ಸ್ಪರ್ಧೆಯಲ್ಲಿಅಂಜು (53 ಕೆ.ಜಿ), ಪ್ರಿಯಾಂಕ (57 ಕೆ.ಜಿ), ಅಂಜಲಿ (59 ಕೆ.ಜಿ), ಟೀನಾ (65 ಕೆ.ಜಿ), ಸೋನಿಕಾ ಹೂಡಾ (68 ಕೆ.ಜಿ), ನಿಶಾ (72 ಕೆ.ಜಿ) ಮತ್ತು ಕರುಣಾ (76 ಕೆ.ಜಿ) ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 

ಉತ್ತರ ಪ್ರದೇಶದ ನೀಲಂ (50 ಕೆ.ಜಿ) ಮತ್ತು ಅರ್ಜು ತೋಮರ್‌ (55ಕೆ.ಜಿ) ವಿಭಾಗದಲ್ಲಿ ಜಯಿಸಿದರೇ, ಮಧ್ಯಪ್ರದೇಶದ ಅಪೂರ್ವಾ (62 ಕೆ.ಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ತಂಡಗಳ ಚಾಂಪಿಯನ್‌ಷಿಪ್‌ನಲ್ಲಿ ಹರಿಯಾಣ ಪ್ರಥಮ ಸ್ಥಾನ ಗಳಿಸಿತು. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !