ಬುಧವಾರ, ಮೇ 18, 2022
23 °C
ರಾಜ್ಯ ಸಬ್‌ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌

ಎಚ್‌ಬಿಆರ್‌, ಎಂಸಿಎಚ್‌ಎಸ್‌ ತಂಡಗಳಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಚ್‌ಬಿಆರ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮತ್ತು ಎಂಸಿಎಚ್‌ಎಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡಗಳು ರಾಜ್ಯ ಸಬ್‌ಜೂನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನ ಬಾಲಕರ ಫೈನಲ್‌ನಲ್ಲಿ ಎಚ್‌ಬಿಆರ್‌ 62–50ರಿಂದ ಎಂ.ಎನ್‌.ಕೆ. ರಾವ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಎದುರು ಜಯಿಸಿತು. ರಿಷಿತ್‌ (20 ಪಾಯಿಂಟ್ಸ್), ಸಂವೇಗ್ (21) ಮತ್ತು ಚತ್ಮುರ (13) ತಂಡದ ಗೆಲುವಿನಲ್ಲಿ ಪ್ರಮುಖ ‍ಪಾತ್ರ ವಹಿಸಿದರು. ಎಂ.ಎನ್‌.ಕೆ. ರಾವ್ ತಂಡದ ದರ್ಶ್ 18 ಪಾಯಿಂಟ್ಸ್ ಕಲೆಹಾಕಿದರು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ್ ಎಸ್‌ಯು 44–40ರಿಂದ ಬೆಂಗಳೂರು ಸ್ಪೋರ್ಟಿಂಗ್ ತಂಡವನ್ನು ಸೋಲಿಸಿತು. ಭಾರತ್ ಪರ ಸಂಜಿತ್‌ ಎ. 17 ಪಾಯಿಂಟ್ಸ್ ಗಳಿಸಿದರು.

ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಎಂಸಿಎಚ್‌ಎಸ್‌ 48–47ರಿಂದ ಕೋರಮಂಗಲ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿತು. ವಿಜೇತ ತಂಡದ ಅದಿತಿ 29 ಪಾಯಿಂಟ್ಸ್ ಗಳಿಸಿದರು. ಕೋರಮಂಗಲ ಪರ ಜಯಶ್ರೀ 19 ಮತ್ತು ರುತ್ ಜೇಕಬ್‌ 15 ಪಾಯಿಂಟ್ಸ್ ದಾಖಲಿಸಿದರು.

ಮೂರನೇ ಸ್ಥಾನವು ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಪಾಲಾಯಿತು. ಈ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅಪ್ಪಯ್ಯ 43–32ರಿಂದ ನ್ಯಾಷನಲ್ಸ್ ಮೈಸೂರು ತಂಡವನ್ನು ಸೋಲಿಸಿತು.

ಪ್ರಶಸ್ತಿ ವಿಜೇತ ಎರಡೂ ವಿಭಾಗದ ತಂಡಗಳಿಗೆ ತಲಾ ₹ 20 ಸಾವಿರ, ರನ್ನರ್ಸ್ಅಪ್‌ ₹ 10 ಸಾವಿರ ಮತ್ತು ಮೂರನೇ ಸ್ಥಾನ ಗಳಿಸಿದ ತಂಡಗಳಿಗೆ ತಲಾ ₹ 5 ಸಾವಿರ ಬಹುಮಾನ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.