ಶನಿವಾರ, ಜೂನ್ 6, 2020
27 °C
ಒಲಿಂಪಿಕ್ಸ್‌ ಸಿದ್ಧತೆ, ಸಂಸ್ಥೆಯ ನಿಯಮಾವಳಿಗೆ ತಿದ್ದುಪಡಿ ಚರ್ಚೆ

ಹಾಕಿ ಇಂಡಿಯಾ ವಿಶೇಷ ಅಧಿವೇಶನ 13ಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹಾಕಿ ಇಂಡಿಯಾ ಇದೇ ತಿಂಗಳ 13ರಂದು ಆನ್‌ಲೈನ್‌ ಮೂಲಕ ವಿಶೇಷ ಅಧಿವೇಶನವನ್ನು ಕರೆಯಲಿದೆ. ಇದರಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಪುರುಷರ ಮತ್ತು ಮಹಿಳಾ ತಂಡಗಳ ಸಿದ್ಧತೆಯ ಸ್ಥಿತಿಗತಿ, ಕೋವಿಡ್‌–19 ಪಿಡುಗಿನ ನಂತರ ಆಟದ ಪುನರಾರಂಭದ ಬಗ್ಗೆ ಚರ್ಚೆಯಾಗಲಿದೆ.

ಭಾರತ ಒಲಿಂ‍ಪಿಕ್ ಸಂಸ್ಥೆ ಅಧ್ಯಕ್ಷ ಮತ್ತು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಐಎಚ್‌ಎಫ್‌) ಮುಖ್ಯಸ್ಥ ನರಿಂದರ್‌ ಬಾತ್ರಾ ಅವರು ಈ ಅಧಿವೇಶನಕ್ಕೆ ವಿಶೇಷ ಆಹ್ವಾನಿತರಾಗಿದ್ದಾರ ಎಂದು ಹಾಕಿ ಇಂಡಿಯಾದ ಸುತ್ತೋಲೆ ಗುರುವಾರ ತಿಳಿಸಿದೆ.

ಕೊರೊನಾ ವೈರಸ್‌ ಉಪಟಳದ ಕಾರಣ ಅಧಿವೇಶನವನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ.

ಈ ವರ್ಷದ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ ಸ್ಥಿತಿಗತಿಯೂ ಚರ್ಚೆಗೆ ಬರಲಿದೆ. ರಾಜ್ಯಗಳ ಚಾಂಪಿಯನ್‌ಷಿಪ್‌ ಜೊತೆಗೆ ಮುಂದಿನ ವರ್ಷ ಜಾರಿಯಾಗಲಿರುವ ದೇಶಿಯ ಟೂರ್ನಿಗಳ ಹೊಸ ಸ್ವರೂಪದ ಬಗ್ಗೆಯೂ ಚರ್ಚೆ ಆಗಲಿದೆ.

ಕೋವಿಡ್‌ ನಂತರದ ದಿನಗಳಲ್ಲಿ ಕ್ರೀಡಾ ಚಟುವಟಿಕೆಯ ಪುನರಾರಂಭದ ಬಗ್ಗೆ ಐಒಎ ನಡೆಸಿರುವ ಸಮೀಕ್ಷೆಯಲ್ಲಿ ವ್ಯಕ್ತವಾಗುವ ಅಂಶಗಳ ಬಗ್ಗೆಯೂ ಈ ಅಧಿವೇಶನದಲ್ಲಿ ಪ್ರಸ್ತಾಪವಾಗಲಿದೆ.

ಹಾಕಿ ಇಂಡಿಯಾ ನಿಯಮಾವಳಿಗೆ ಉದ್ದೇಶಿತ ತಿದ್ದುಪಡಿ, ಹಾಕಿ ಇಂಡಿಯಾದ ಸಿಇಒ ವಾರ್ಷಿಕ ವರದಿಯ ವಿಷಯವೂ ಪರಿಗಣನೆಗೆ ಬರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು