ಶುಕ್ರವಾರ, ನವೆಂಬರ್ 15, 2019
26 °C
ರಾಷ್ಟ್ರೀಯ ಶಿಬಿರಕ್ಕೆ ಭಾರತ ಪುರುಷರ ಹಾಕಿ ತಂಡ ಪ್ರಕಟ

ಹಾಕಿ: ಕನ್ನಡಿಗ ಸುನಿಲ್‌ಗೆ ಅವಕಾಶ

Published:
Updated:
Prajavani

ನವದೆಹಲಿ: ಮುಂಬರುವ ಒಲಿಂಪಿಕ್‌ ಅರ್ಹತಾ ಟೂರ್ನಿಗೆ ‍ಪೂರ್ವಸಿದ್ಧತೆ ಕೈಗೊಳ್ಳುವ ಸಲುವಾಗಿ ಆಯೋಜಿಸಿರುವ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಭಾನುವಾರ ಹಾಕಿ ಇಂಡಿಯಾ 22 ಸದಸ್ಯರ ಪುರುಷರ ತಂಡವನ್ನು ಪ್ರಕಟಿಸಿದೆ.

ಈ ತಂಡದಲ್ಲಿ ಕರ್ನಾಟಕದ ಎಸ್‌.ವಿ.ಸುನಿಲ್‌ ಅವರು ಸ್ಥಾನ ಪಡೆದಿದ್ದಾರೆ.

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಸೋಮವಾರದಿಂದ ಶಿಬಿರ ಆರಂಭವಾಗಲಿದೆ. ಮುಖ್ಯ ಕೋಚ್‌ ಗ್ರಹಾಂ ರೀಡ್‌ ಅವರು ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ನವೆಂಬರ್‌ 1 ಮತ್ತು 2 ರಂದು ಭುವನೇಶ್ವರದಲ್ಲಿ ನಡೆಯುವ ಒಲಿಂಪಿಕ್‌ ಅರ್ಹತಾ ಟೂರ್ನಿಯ ಪಂದ್ಯಗಳಲ್ಲಿ ಭಾರತವು ರಷ್ಯಾ ತಂಡದ ವಿರುದ್ಧ ಸೆಣಸಲಿದೆ.

‘ಬೆಲ್ಜಿಯಂ ಪ್ರವಾಸದಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದೆವು. ಇದರಿಂದ ಆಟಗಾರರ ಮನೋಬಲ ಹೆಚ್ಚಿದೆ. ರಷ್ಯಾ ವಿರುದ್ಧದ ಪಂದ್ಯಗಳಲ್ಲಿ ವಿಶ್ವಾಸದಿಂದ ಆಡಲು ಇದು ನೆರವಾಗಲಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ರೀಡ್‌ ತಿಳಿಸಿದ್ದಾರೆ.

ತಂಡ ಇಂತಿದೆ: ಪಿ.ಆರ್‌.ಶ್ರೀಜೇಶ್‌ ಮತ್ತು ಕೃಷ್ಣ ಬಹದ್ದೂರ್‌ ಪಾಠಕ್‌ (ಇಬ್ಬರೂ ಗೋಲ್‌ಕೀಪರ್‌), ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಸುರೇಂದರ್‌ ಕುಮಾರ್‌, ಬೀರೇಂದ್ರ ಲಾಕ್ರಾ, ರೂಪಿಂದರ್‌ ಪಾಲ್‌ ಸಿಂಗ್‌, ಗುರಿಂದರ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಕೊಥಾಜಿತ್‌ ಸಿಂಗ್‌, ಮನಪ್ರೀತ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ನೀಲಕಂಠ ಶರ್ಮಾ, ವಿವೇಕ್‌ ಸಾಗರ್‌ ಪ್ರಸಾದ್‌, ಸಿಮ್ರನ್‌ಜೀತ್‌ ಸಿಂಗ್‌, ಆಕಾಶ್‌ದೀಪ್ ಸಿಂಗ್‌, ರಮಣದೀಪ್ ಸಿಂಗ್‌, ಎಸ್‌.ವಿ.ಸುನಿಲ್‌, ಮನದೀಪ್‌ ಸಿಂಗ್‌, ಲಲಿತ್‌ಕುಮಾರ್‌ ಉಪಾಧ್ಯಾಯ, ಗುರುಶಾಹೀಬ್‌ಜಿತ್‌ ಸಿಂಗ್‌ ಮತ್ತು ಶಂಷೇರ್‌ ಸಿಂಗ್‌.

ಪ್ರತಿಕ್ರಿಯಿಸಿ (+)