ಬುಧವಾರ, ಜೂಲೈ 8, 2020
28 °C

ಮೊತ್ತ ಹೆಚ್ಚಿಸಿದ ಹಾಕಿ ಇಂಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಕೋವಿಡ್ ವಿರುದ್ಧದ ಸಮರಕ್ಕೆ ಕೈಜೋಡಿಸಿರುವ ಹಾಕಿ ಇಂಡಿಯಾವು (ಎಚ್‌ಐ) ಪಿಎಂ ಕೇರ್ಸ್ ನಿಧಿಗೆ ಮತ್ತೆ ₹ 75 ಲಕ್ಷ ದೇಣಿಗೆ ನೀಡಿದೆ. ಈ ಮೂಲಕ ಸಂಸ್ಥೆ ನೀಡಿದ ಒಟ್ಟು ಮೊತ್ತ ₹ 1 ಕೋಟಿಗೆ ಏರಿದೆ.

ಶನಿವಾರ ನಡೆದ ಸಂಸ್ಥೆಯ ಕಾರ್ಯ ಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ತಿಳಿಸಲಾಗಿದೆ. ಏಪ್ರಿಲ್ ಒಂದರಂದು
₹ 25 ಲಕ್ಷ ನೀಡುವುದಾಗಿ ಘೋಷಿಸಿತ್ತು. 

‘ದೇಶ ತೀವ್ರ ಸಂಕಷ್ಟದಲ್ಲಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸು ಮಾಡಬೇಕಾದುದು ಅನಿವಾರ್ಯ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್ ಮುಷ್ತಾಕ್ ಅಹಮ್ಮದ್ ಹೇಳಿದ್ದಾರೆ.

ಅನಿರ್ಬನ್ ಲಾಹಿರಿ ದೇಣಿಗೆ: ಗಾಲ್ಫ್ ಆಟಗಾರ ಅನಿರ್ಬನ್ ಲಾಹಿರಿ, ಪಿಎಂ ‘ಕೇರ್ಸ್‌’ ನಿಧಿಗೆ ₹ 7 ಲಕ್ಷ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು