ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌: ಅರ್ಜುನ್‌ ಸಿಂಗ್‌ ಚಿನ್ನದ ಸಾಧನೆ

ಐಎಸ್‌ಎಸ್‌ಎಫ್‌
Last Updated 2 ಸೆಪ್ಟೆಂಬರ್ 2018, 14:09 IST
ಅಕ್ಷರ ಗಾತ್ರ

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ಆಯೋಜಿಸಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅರ್ಜುನ್‌ ಸಿಂಗ್‌ ಖೀಮಾ ಅವರು ಚಿನ್ನದ ಪದಕ ಜಯಿಸಿದ್ದಾರೆ. ‌

ಭಾನುವಾರ ಇಲ್ಲಿ ನಡೆದ 50 ಮೀಟರ್ಸ್‌ ಪಿಸ್ತೂಲ್‌ಪುರುಷರ ಜೂನಿಯರ್‌ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಅರ್ಜುನ್‌, 559 ಸ್ಕೋರ್‌ ಗಳಿಸಿದರು. ದಕ್ಷಿಣ ಕೊರಿಯಾದ ವೂಜೊಂಗ್‌ ಕಿಮ್‌ ಅವರು 554 ಸ್ಕೋರ್‌ನೊಂದಿಗೆ ಬೆಳ್ಳಿಯ ಪದಕ ಗೆದ್ದರು. 551 ಸ್ಕೋರ್‌ ಗಳಿಸಿದ ಭಾರತದ ಗೌರವ್‌ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪುರುಷರ ತಂಡ ವಿಭಾಗದಲ್ಲಿ ಭಾರತವು ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಅರ್ಜುನ್‌, ಗೌರವ್‌ ಹಾಗೂ ಅನ್‌ಮೋಲ್‌ ಜೈನ್‌ ಅವರಿದ್ದ ಈ ತಂಡವು ಒಟ್ಟು 1659 ಪಾಯಿಂಟ್ಸ್‌ ಸಂಗ್ರಹಿಸಿತು. 1640 ಪಾಯಿಂಟ್ಸ್‌ ಗಳಿಸಿದ ದಕ್ಷಿಣ ಕೊರಿಯಾ ಬೆಳ್ಳಿಯ ಸಾಧನೆ ಮಾಡಿತು. ಚೀನಾದ ತಂಡವು ಕಂಚಿಗೆ ತೃಪ್ತಿಪಟ್ಟುಕೊಂಡಿತು.

10 ಮೀಟರ್ಸ್‌ ಏರ್‌ ರೈಫಲ್‌ ಮಿಶ್ರ ವಿಭಾಗದ ಅರ್ಹತಾ ಸುತ್ತಿನಲ್ಲಿ ಅಪೂರ್ವಿ ಚಾಡೇಲಾ ಹಾಗೂ ರವಿ ಕುಮಾರ್‌ ಜೋಡಿಯು ಏಳನೇ ಸ್ಥಾನ‍ಪಡೆಯಿತು. ಇದರೊಂದಿಗೆ ಫೈನಲ್‌ ಪ್ರವೇಶಿಸಲು ವಿಫಲವಾಯಿತು.ಈ ಜೋಡಿಯು ಒಟ್ಟು 835.6 ಪಾಯಿಂಟ್ಸ್‌ ಸಂಗ್ರಹಿಸಿತು.

831.6 ಪಾಯಿಂಟ್ಸ್‌ ಸಂಗ್ರಹಿಸಿದ ದೀಪಕ್‌ ಕುಮಾರ್‌ ಹಾಗೂ ಮೆಹುಲಿ ಘೋಷ್‌ ಜೋಡಿಯು 25ನೇ ಸ್ಥಾನ ಪಡೆಯಿತು.

ಏರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಭಾರತದ ಹೀನಾ ಸಿಧು ಹಾಗೂ ಶಹಜಾರ್‌ ರಿಜ್ವಿ ಅವರು 768 ಪಾಯಿಂಟ್ಸ್‌ ಗಳಿಸಿ 10ನೇ ಸ್ಥಾನ ಪಡೆದರು. 767 ಪಾಯಿಂಟ್ಸ್‌ ಸಂಗ್ರಹಿಸಿದ ಅಭಿಷೇಕ್‌ ವರ್ಮಾ ಹಾಗೂ ಮನು ಭಾಕರ್‌ ಜೋಡಿಯು 12ನೇ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT