ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics| 17ರಂದು ಟೋಕಿಯೊಗೆ ಭಾರತದ ಬಾಕ್ಸರ್‌ಗಳು

Last Updated 11 ಜುಲೈ 2021, 12:56 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ಗಾಗಿ ಇಟಲಿಯಲ್ಲಿ ತರಬೇತಿ ನಡೆಸುತ್ತಿರುವ ಭಾರತದ ಬಾಕ್ಸರ್‌ಗಳ ತಂಡವು ಇದೇ 17ರಂದು ಟೋಕಿಯೊಗೆ ತೆರಳಲಿದೆ.

ಐವರು ಪುರುಷ ಮತ್ತು ನಾಲ್ವರು ಮಹಿಳೆಯರು ಸೇರಿ ಭಾರತದ ಒಂಬತ್ತು ಮಂದಿ ಬಾಕ್ಸರ್‌ಗಳು ಟೋಕಿಯೊ ಟಿಕೆಟ್ ಗಿಟ್ಟಿಸಿದ್ದಾರೆ. ಸದ್ಯ ಇವರೆಲ್ಲರೂ ಕೊನೆಯ ಹಂತದ ಸಿದ್ಧತೆಗಾಗಿ ಇಟಲಿಯ ಅಸ್ಸಿಸಿಯಲ್ಲಿದ್ದಾರೆ. ಜುಲೈ 23ರಂದು ಒಲಿಂಪಿಕ್ಸ್ ಆರಂಭವಾಗಲಿದ್ದು, 24ರಂದು ಬಾಕ್ಸಿಂಗ್ ಸ್ಪರ್ಧೆಗಳು ಶುರುವಾಗಲಿವೆ.

ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಅಮಿತ್ ಪಂಘಾಲ್‌ (52 ಕೆಜಿ ವಿಭಾಗ), ಮನೀಷ್ ಕೌಶಿಕ್‌ (63ಕೆಜಿ ವಿಭಾಗ), ವಿಕಾಸ್ ಕ್ರಿಷನ್‌ (69 ಕೆಜಿ), ಆಶಿಶ್ ಕುಮಾರ್‌ (75ಕೆಜಿ) ಹಾಗೂ ಸತೀಶ್ ಕುಮಾರ್‌ (+91 ಕೆಜಿ) ಭಾರತದ ಪುರುಷರ ತಂಡದಲ್ಲಿ ಇದ್ದಾರೆ. ಮಹಿಳಾ ತಂಡವು ಆರು ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ (51 ಕೆಜಿ), ಸಿಮ್ರನ್‌ಜೀತ್ ಕೌರ್‌ (60 ಕೆಜಿ), ಲವ್ಲಿನಾ ಬೊರ್ಗೊಹೈನ್‌ (69 ಕೆಜಿ) ಮತ್ತು ಪೂಜಾ ರಾಣಿ (75 ಕೆಜಿ) ಅವರನ್ನು ಒಳಗೊಂಡಿದೆ.

‘ಪ್ರಯಾಣದ ಯೋಜನೆಗಳನ್ನು ಅಂತಿಮಗೊಳಿಸಲಾಗಿದೆ. ಜುಲೈ 17ರಂದು ತಂಡವು ಟೋಕಿಯೊ ವಿಮಾನವೇರಲಿದೆ‘ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಿಂದ ಅಥ್ಲೀಟ್‌ಗಳ ಮೊದಲ ತಂಡವೂ 17ರಂದೇ ಟೋಕಿಯೊಗೆ ತೆರಳುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT