ರೂಪಿಂದರ್‌ ಹ್ಯಾಟ್ರಿಕ್‌ ಗೋಲು: ಭಾರತ ತಂಡಕ್ಕೆ ಜಯ

7

ರೂಪಿಂದರ್‌ ಹ್ಯಾಟ್ರಿಕ್‌ ಗೋಲು: ಭಾರತ ತಂಡಕ್ಕೆ ಜಯ

Published:
Updated:

ಬೆಂಗಳೂರು: ರೂಪಿಂದರ್‌ ಪಾಲ್‌ ಸಿಂಗ್ ಅವರು ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತ ‘ಎ’ ತಂಡವು ಅಭ್ಯಾಸ ಪಂದ್ಯದಲ್ಲಿ ಜಯಿಸಿದೆ. 

ಶುಕ್ರವಾರ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 5–1ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿದೆ.

ಭಾರತ ತಂಡವು ಪಂದ್ಯದ ಆರಂಭದಿಂದಲೂ ಉತ್ತಮ ಆಟವಾಡಿತು. ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು 24ನೇ ನಿಮಿಷದಲ್ಲಿ ಭೇದಿಸಿದ ರೂಪಿಂದರ್‌ ಅವರು ಗೊಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅವರು 47 ಹಾಗೂ 60ನೇ ನಿಮಿಷಗಳಲ್ಲೂ ಗೋಲು ದಾಖಲಿಸಿದರು. ಭಾರತದ ಪರವಾಗಿ ಗುರ್ಜೀಂದರ್‌ (27ನೇ ನಿ.) ಹಾಗೂ ವಿಕಾಸ್‌ ದಹಿಯಾ (54ನೇ ನಿ.) ಅವರು ತಲಾ ಒಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು.  

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !