ಮಂಗಳವಾರ, ಫೆಬ್ರವರಿ 18, 2020
21 °C

ಕೊಕ್ಕೊದಲ್ಲಿ ಎರಡೂ ಚಿನ್ನ ಭಾರತಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಠ್ಮಂಡು: ದಕ್ಷಿಣ ಏಷ್ಯಾ ಕ್ರೀಡಾಕೂಟದ ಕೊಕ್ಕೊದಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡದವರು ಚಿನ್ನ ಗೆದ್ದು ಸಂಭ್ರಮಿಸಿದರು. ‍ಫೈನಲ್‌ನಲ್ಲಿ ಪುರುಷರ ತಂಡ ಬಾಂಗ್ಲಾದೇಶವನ್ನೂ ಮಹಿಳೆಯರ ತಂಡ ನೇಪಾಳವನ್ನೂ ಮಣಿಸಿತು.

2016ರಲ್ಲಿ ಚಿನ್ನ ಗೆದ್ದಿದ್ದ ಭಾರತ ಪುರುಷರ ತಂಡ ಈ ಬಾರಿಯೂ ಪ್ರಾಬಲ್ಯ ಮೆರೆಯಿತು. ಫೈನಲ್‌ನಲ್ಲಿ ಇನಿಂಗ್ಸ್ ಮತ್ತು 7 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿತು. ದೀಪಕ್ 5 ಪಾಯಿಂಟ್‌ಗಳನ್ನು ಗಳಿಸಿ ಮಿಂಚಿದರು. ನೇಪಾಳ ಮೂರನೇ ಸ್ಥಾನ ಗಳಿಸಿತು. ಮಹಿಳಾ ತಂಡ ಇನಿಂಗ್ಸ್‌ ಮತ್ತು 12 ಪಾಯಿಂಟ್‌ಗಳಿಂದ ಜಯ ಗಳಿಸಿತು. ನಾಯಕಿ ನಸ್ರೀನ್ ಮತ್ತು ಕಾಜರ್ ಭೊರ್ ಉತ್ತಮ ಆಟವಾಡಿದರು. ಬಾಂಗ್ಲಾದೇಶ ಕಂಚಿನ ಪದಕ ಗಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು