ಭಾನುವಾರ, ಡಿಸೆಂಬರ್ 6, 2020
19 °C

ಸಾರ್‌ಲೊರ್‌ಲಕ್ಷ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಅಜಯ್‌ ಜಯರಾಮ್‌ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಾರ್‌ಬ್ರೂಕನ್‌, ಜರ್ಮನಿ: ಭಾರತದ ಅಜಯ್‌ ಜಯರಾಮ್‌ ಅವರು ಸಾರ್‌ಲೊರ್‌ಲಕ್ಷ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ಇಲ್ಲಿ ಆರಂಭವಾದ ಟೂರ್ನಿಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅವರು 21–8, 21–8ರಿಂದ ಬೆಲ್ಜಿಯಂನ ಮ್ಯಾಕ್ಸಿಮ್‌ ಮೊರೀಲ್ಸ್ ಅವರನ್ನು ಮಣಿಸಿದರು.

ಮುಂದಿನ ಪಂದ್ಯದಲ್ಲಿ ಅವರು ನೆದರ್ಲೆಂಡ್ಸ್‌ ಆಟಗಾರ ಮೂರನೇ ಶ್ರೇಯಾಂಕದ ಮಾರ್ಕ್‌ ಕ್ಯಾಲ್ಜೊ ಅವರನ್ನು ಎದುರಿಸಲಿದ್ದಾರೆ.

ಮೊದಲ ಸುತ್ತಿನ ಹಣಾಹಣಿಯಲ್ಲಿ ಜಯರಾಮ್‌ ಆರಂಭದಲ್ಲೇ 6–0 ಮುನ್ನಡೆ ಗಳಿಸಿದರು. ವಿರಾಮದ ವೇಳೆ ಈ ಮುನ್ನಡೆ 11–4ಕ್ಕೆ ತಲುಪಿತ್ತು. ಬಳಿಕ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.

ಎರಡನೇ ಗೇಮ್‌ನ ಆರಂಭದಲ್ಲಿ ಬೆಲ್ಜಿಯಂ ಆಟಗಾರ ತುಸು ಪೈಪೋಟಿ ನೀಡಿದರು. ಜಯರಾಮ್‌ ಅವರಿಗೆ 6–4ರ ಮುನ್ನಡೆ ಸಿಕ್ಕಿತ್ತು. ಬಳಿಕ 11 ನೇರ ಪಾಯಿಂಟ್ಸ್ ದಾಖಲಿಸಿದ ಭಾರತದ ಆಟಗಾರ 17–6ರೊಂದಿಗೆ ಮುನ್ನಡೆದು ಪಂದ್ಯ ವಶಕ್ಕೆ ಪಡೆದರು.

ಹಾಲಿ ಚಾಂಪಿಯನ್‌ ಭಾರತದ ಲಕ್ಷ್ಯ ಸೇನ್‌, 2018ರಲ್ಲಿ ಚಾಂಪಿಯನ್ ಆಗಿರುವ ಶುಭಾಂಕರ್ ಡೇ ಹಾಗೂ ಮಾಳವಿಕಾ ಬನ್ಸೋದ್‌ ಅವರು ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು