ಭಾನುವಾರ, ಡಿಸೆಂಬರ್ 4, 2022
19 °C

ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ವಿಶ್ವದ ಅಗ್ರ ರ‍್ಯಾಂಕಿಂಗ್‌ನ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಜೂಲಿಯಸ್‌ ಬೇರ್‌ ಜೆನರೇಷನ್‌ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿ ಗೆದ್ದುಕೊಂಡರು.

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಎರಿಗೈಸಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಎರಡು ಹಂತಗಳಲ್ಲಿ ನಡೆದ ಫೈನಲ್‌ನ ಮೊದಲ ಹಂತದ ಬಳಿಕ ಕಾರ್ಲ್‌ಸನ್‌ 2.5–0.5 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದ್ದರು. ಸೋಮವಾರ ನಡೆದ ಎರಡನೇ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಚಾಂಪಿಯನ್‌ ಆದರು.

ಫೈನಲ್‌ ಪಂದ್ಯವನ್ನು ಬ್ಲಿಟ್ಜ್‌ ಟೈಬ್ರೇಕರ್‌ಗೆ ಕೊಂಡೊಯ್ಯಬೇಕಿದ್ದರೆ, ಎರಿಗೈಸಿ ಎರಡನೇ ಹಂತದಲ್ಲಿ ಗೆಲುವು ಪಡೆಯಲೇಬೇಕಿತ್ತು. ಆದರೆ ಈ ಟೂರ್ನಿಯುದ್ಧಕ್ಕೂ ಅದ್ಭುತ ಫಾರ್ಮ್‌ ತೋರಿದ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌ ಎದುರು ಅವರು ಮುಗ್ಗರಿಸಿದರು.

19 ವರ್ಷದ ಎರಿಗೈಸಿ ಮೊದಲ ಪಂದ್ಯದಲ್ಲಿ 48 ನಡೆಗಳ ಬಳಿಕ ಸೋಲೊಪ್ಪಿಕೊಂಡರೆ, ಎರಡನೇ ಪಂದ್ಯದಲ್ಲಿ 52 ನಡೆಗಳಲ್ಲಿ ಶರಣಾದರು.

ಇಲ್ಲಿ ಪ್ರಶಸ್ತಿ ಗೆಲ್ಲದಿದ್ದರೂ, ಎರಿಗೈಸಿ ಅವರು ಹಲವು ಪ್ರಮುಖ ಆಟಗಾರರನ್ನು ಸೋಲಿಸಿ ಗಮನ ಸೆಳೆದರು. ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೆಲ್ಟ್‌ವಾಟರ್‌ ಚೆಸ್‌ ಟೂರ್‌ ಫೈನಲ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು