ಕ್ವಾರ್ಟರ್‌ಗೆ ಕರ್ನಾಟಕ

7

ಕ್ವಾರ್ಟರ್‌ಗೆ ಕರ್ನಾಟಕ

Published:
Updated:

ಗ್ವಾಲಿಯರ್‌: ಅಮೋಘ ಆಟ ಆಡಿದ ಕರ್ನಾಟಕ ತಂಡದವರು ರಾಷ್ಟ್ರೀಯ ‘ಎ’ ಡಿವಿಷನ್‌ ಪುರುಷರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಮಧ್ಯಪ್ರದೇಶ ಹಾಕಿ ಅಕಾಡೆಮಿಯ ಅಂಗಳದಲ್ಲಿ ಮಂಗಳವಾರ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ಎಸ್‌.ವಿ.ಸುನಿಲ್‌ ಬಳಗ 3–2 ಗೋಲುಗಳಿಂದ ಒಡಿಶಾ ತಂಡವನ್ನು ಸೋಲಿಸಿತು.

ಆರಂಭದಲ್ಲಿ ಒಡಿಶಾ ಮೇಲುಗೈ ಸಾಧಿಸಿತು. ಈ ತಂಡ 2–0 ಗೋಲುಗಳಿಂದ ಮುಂದಿತ್ತು. ಇದರಿಂದ ಸುನಿಲ್‌ ಪಡೆ ವಿಚಲಿತವಾಗಲಿಲ್ಲ. ವಿ.ಆರ್‌.ರಘುನಾಥ್‌ 25 ಮತ್ತು 31ನೇ ನಿಮಿಷಗಳಲ್ಲಿ ಗೋಲು ಹೊಡೆದು ಸಂಭ್ರಮಿಸಿದರು. ಹೀಗಾಗಿ 2–2 ಸಮಬಲ ಕಂಡುಬಂತು. ರೋಚಕ ಘಟ್ಟದಲ್ಲಿ ನಾಯಕ ಸುನಿಲ್‌ (56ನೇ ನಿಮಿಷ) ಚೆಂಡನ್ನು ಗುರಿ ತಲುಪಿಸಿ ಕರ್ನಾಟಕ ತಂಡದ ಖುಷಿಗೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !