ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ದಾವಣಗೆರೆ ತಂಡಕ್ಕೆ ಜಯ

ರಾಜ್ಯ ಮಿನಿ ಒಲಿಂಪಿಕ್‌ ಕ್ರೀಡಾಕೂಟ: ರಿಧಿಮಾಗೆ ಚಿನ್ನ
Last Updated 4 ಫೆಬ್ರುವರಿ 2020, 17:31 IST
ಅಕ್ಷರ ಗಾತ್ರ

ಬೆಂಗಳೂರು:ಉತ್ತಮ ಆಟವಾಡಿದ ದಾವಣಗೆರೆ ಹಾಗೂ ಬಾಗಲಕೋಟೆ ಬಾಲಕರ ಕಬಡ್ಡಿ ತಂಡಗಳು ರಾಜ್ಯ ಮಿನಿ ಒಲಿಂಪಿಕ್‌ ಕ್ರೀಡಾಕೂಟದ ಎರಡನೇ ದಿನ ಜಯ ದಾಖಲಿಸಿಮುನ್ನಡೆದವು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರ ಆಯೋಜಿಸಿರುವ ಕೂಟದಲ್ಲಿ ದಾವಣಗೆರೆ ತಂಡ 33–21ರಿಂದ ಮೈಸೂರು ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಬಾಗಲಕೋಟೆ ತಂಡವು ಮಂಡ್ಯ ವಿರುದ್ಧ 22–20ರಿಂದ ಗೆದ್ದಿತು.

ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ 44–14ರಿಂದ ಬೆಂಗಳೂರು ಗ್ರಾಮಿಣ ವಿರುದ್ಧ, ಕೋಲಾರ ತಂಡ ಚಿಕ್ಕಮಗಳೂರು ವಿರುದ್ಧ 33–30ರಿಂದ ಹಾಗೂ ಬೆಳಗಾವಿ ತಂಡವು ಗದಗ ತಂಡದ ಎದುರು 39–25ರಿಂದ ಗೆದ್ದವು.

ಹಾಕಿ: ಹಾಕಿ ಕೂರ್ಗ್‌ ಬಾಲಕರ ತಂಡ11–1ರಿಂದ ಬೆಳಗಾವಿ ಎದುರು ಹಾಗೂ ಹಾಕಿ ಕೂರ್ಗ್‌ ಬಾಲಕಿಯರ ತಂಡ ಬೆಂಗಳೂರು ಗ್ರಾಮಾಂತರ ತಂಡದ ಎದುರು 9–0 ದಿಂದ ಜಯ ಸಾಧಿಸಿದವು.

ಫುಟ್‌ಬಾಲ್‌: ಕೂಟದ ಎರಡನೇ ದಿನ ಮೈಸೂರು ಬಾಲಕರ ತಂಡ ದಕ್ಷಿಣ ಕನ್ನಡ ತಂಡವನ್ನು 3–2ರಿಂದ, ಮಂಗಳೂರು ತಂಡ ಕೊಡಗು ಎದುರು 6–0 ಯಿಂದ, ಬೆಳಗಾವಿ ತಂಡ ರಾಯಚೂರು ಎದುರು 8–0 ಗೋಲುಗಳಿಂದ ಜಯಿಸಿ ಮುನ್ನಡೆದವು.

ವಾಲಿಬಾಲ್‌: ಬಾಲಕರ ವಾಲಿಬಾಲ್‌ ಸ್ಪರ್ಧೆಗಳಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ, ತುಮಕೂರು, ಕೊಪ್ಪಳ ತಂಡಗಳು ಜಯ ಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದವು.

ಈಜು ಸ್ಪರ್ಧೆಯ ಫಲಿತಾಂಶಗಳು

ಬಾಲಕರ 1500 ಮೀ. ಫ್ರೀಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಎನ್‌. ಧೋನೀಶ್‌ (18 ನಿಮಿಷ 42.21 ಸೆಕೆಂಡು) ಚಿನ್ನ ಗೆದ್ದರು. ಈ ವಿಭಾಗದ ಬೆಳ್ಳಿ ಪವನ್‌.ಡಿ ಪಾಲಾದರೆ, ವಿಶ್ವನಾಥ್‌ ಎಸ್‌ ಕಂಚು ಗಳಿಸಿದರು.

ಬಾಲಕಿಯರ 1500 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ರಿತಿಕಾ ಬಿ.ಎಮ್‌. (20 ನಿ, 20.75 ಸೆ.) ಚಿನ್ನ, ಸೃಷ್ಟಿ ಸತೀಶ್ವರ್‌ ಬೆಳ್ಳಿ ಹಾಗೂ ಲಕ್ಷ್ಮೀ ನಿಕ್ಕಮ್‌ ಕಂಚಿನ ಪದಕ ಗೆದ್ದರು.

ಬಾಲಕರ 50 ಮೀ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ವಿದಿತ್‌ ಶಂಕರ್‌ ಚಿನ್ನ (33.66 ಸೆಕೆಂಡು), ಇಂದ್ರ ಪ್ರಕಾಶ್‌ ಆರ್ಯ ಬೆಳ್ಳಿ ಹಾಗೂ ಅಮಿಶ್‌ ಪ್ರಸಾದ್‌ ಕಂಚು ಗೆದ್ದರು. ಈ ಸ್ಪರ್ಧೆಯ ಬಾಲಕಿಯರ ವಿಭಾಗದ ಚಿನ್ನವು ಹಿತೈಷಿ ವಿ (37.13 ಸೆಕೆಂಡು) ಅವರ ಪಾಲಾಯಿತು. ವಿಹಿತಾ ನಯನಾ ಬೆಳ್ಳಿ ಹಾಗೂ ಪೂಜಾ ಪೆದ್ದಸೋಮಯ್ಯಾಜುಲು ಕಂಚು ಒಲಿಸಿಕೊಂಡರು.

ಬಾಲಕರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಮನನ್‌ ಎಂ.ಸಿ ಚಿನ್ನ (1 ನಿಮಿಷ 8.60 ಸೆಕೆಂಡು), ಆಕಾಶ್‌ ಮಣಿ ಬೆಳ್ಳಿ ಹಾಗೂ ಯಜತ್‌ ಅಯ್ಯಪ್ಪ ಕೆ.ಪಿ ಕಂಚು ಗೆದ್ದರು. ಇದೇ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಈಜು ಕೇಂದ್ರದ (ಬಿಎಸಿ) ರಿಧಿಮಾ ವೀರೇಂದ್ರ ಕುಮಾರ್‌ ಚಿನ್ನ (1 ನಿಮಿಷ 10.95 ಸೆಕೆಂಡು), ಆಶ್ನಾ ಮತ್ತೂರ್‌ ಬೆಳ್ಳಿ ಹಾಗೂ ನೈಷಾ ಶೆಟ್ಟಿ ಕಂಚಿನ ಪದಕ ಗಳಿಸಿದರು.ಬಾಲಕರ 100 ಮೀ. ಬಟರ್‌ಫ್ಲೈನಲ್ಲಿ ಕಾರ್ತಿಕೇಯನ್‌ ನಾಯರ್‌ ಚಿನ್ನ (1 ನಿ, 5.39 ಸೆ.), ನೀಲೇಶ್‌ ದಾಸ್‌ ಬೆಳ್ಳಿ ಹಾಗೂ ಧನುಷ್‌ ಎಸ್‌. ಕಂಚು ಗೆದ್ದರು. ಬಾಲಕಿಯರ ವಿಭಾಗದ ಚಿನ್ನ ರಿಷಿಕಾ ಮಂಗ್ಲೆ (1 ನಿ. 9.46 ಸೆ.) ಅವರ ಪಾಲಾದರೆ, ಅನ್ಷು ದೇಶಪಾಂಡೆ ಬೆಳ್ಳಿ ಹಾಗೂ ಹಂಶಿಕಾ ಆರ್‌. ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT