ಕೊಡವ ಹಾಕಿ: ಕೋದಂಡ ಚೆರುವಾಳಂಡ ತಂಡಕ್ಕೆ ಜಯ

ಸೋಮವಾರ, ಮೇ 27, 2019
28 °C
ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ

ಕೊಡವ ಹಾಕಿ: ಕೋದಂಡ ಚೆರುವಾಳಂಡ ತಂಡಕ್ಕೆ ಜಯ

Published:
Updated:

ಮಡಿಕೇರಿ: ಕೋದಂಡ ತಂಡವು ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಬುಧವಾರ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಕಾಕೋಟುಪರಂಬು ಮೈದಾನದಲ್ಲಿ ಹಾಕಿ ಕೂರ್ಗ್‌ ಆಶ್ರಯದಲ್ಲಿ ನಡೆಯು ತ್ತಿರುವ ಟೂರ್ನಿಯಲ್ಲಿ ಕೋದಂಡವು 1–0 ಗೋಲಿನಿಂದ ಅಲ್ಲಾರಂಡ ತಂಡ ವನ್ನು ಮಣಿಸಿತು. ವಿಜೇತ ತಂಡದ ಪರ ಜಸ್ಸಿ ಅಪ್ಪಣ್ಣ ಏಕೈಕ ಗೋಲು ದಾಖಲಿಸಿದರು.

ಕೊಂಗಂಡ ತಂಡವು 4-2 ಗೋಲು ಗಳಿಂದ ಪಾಲಂದಿರ ತಂಡವನ್ನು ಸೋಲಿಸಿತು. ಕುಮ್ಮಂಡ ತಂಡವು 2-0 ಗೋಲುಗಳಿಂದ ಚೇರಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಕುಮ್ಮಂಡ ದ ಪರವಾಗಿ ನಾಗೇಶ್ ಎರಡು ಗೋಲು ತಂದಿತ್ತರು.

ಅರೆಯಡ ತಂಡವು 2-0 ಗೋಲು ಗಳಿಂದ ಚೌರೀರ ವಿರುದ್ಧ ಜಯಿಸಿತು. ಅರೆಯಂಡ ಪರ ವಿವಿನ್ ಹಾಗೂ ಚಂಗಪ್ಪ ತಲಾ ಒಂದೊಂದು ಗೋಲು ಗಳಿಸಿದರು. ಉಳಿದಂತೆ ಕಾಂಡಂಡ ತಂಡವು 3-2 ಗೋಲುಗಳಿಂದ ಬೊಟ್ಟಂ ಗಡದ ವಿರುದ್ಧ; ಕನ್ನಂಡ ತಂಡವು 2-1 ಗೋಲುಗಳಿಂದ ಬೊಳಕಾರಂಡದ ಎದುರು; ಚೆರುವಾಳಂಡ ತಂಡವು 4-0 ಗೋಲುಗಳಿಂದ ಕುಂಚೇಟ್ಟಿರ ಮೇಲೆ ಜಯ ಸಾಧಿಸಿದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !