‘ಏಷ್ಯನ್‌ ಕ್ರೀಡಾಕೂಟದಲ್ಲಿ ಶೂಟರ್‌ ಅನೀಶ್‌, ಮನು ಮೇಲೆ ಹೆಚ್ಚಿನ ನೀರಿಕ್ಷೆ ಸಲ್ಲ’

7

‘ಏಷ್ಯನ್‌ ಕ್ರೀಡಾಕೂಟದಲ್ಲಿ ಶೂಟರ್‌ ಅನೀಶ್‌, ಮನು ಮೇಲೆ ಹೆಚ್ಚಿನ ನೀರಿಕ್ಷೆ ಸಲ್ಲ’

Published:
Updated:
Deccan Herald

ನವದೆಹಲಿ : ‘ಮುಂಬರುವ ಏಷ್ಯನ್‌ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ವಯಸ್ಸಿನಲ್ಲಿ ಚಿಕ್ಕವರಾಗಿರುವ ಭಾರತದ ಶೂಟರ್‌ಗಳಾದ ಅನೀಶ್‌ ಭಾನವಾಲಾ ಹಾಗೂ ಮನು ಭಾಕರ್‌ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಇದರಿಂದ ಅವರ ಮೇಲೆ ಒತ್ತದ ಹೆಚ್ಚಾಗಲಿದೆ’ ಎಂದು ಭಾರತದ ಹಿರಿಯ ಶೂಟರ್‌ ಜಸ್ಪಾಲ್‌ ರಾಣಾ ಹೇಳಿದ್ದಾರೆ. 

15 ವರ್ಷದ ಅನೀಶ್‌, ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು. 16 ವರ್ಷದ ಮನು, 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು.

‘ಈ ಇಬ್ಬರು ಜೂನಿಯರ್‌ಗಳಿಂದ ಅಧಿಕ ಸಾಮರ್ಥ್ಯವನ್ನು ಅಪೇಕ್ಷಿಸುತ್ತಿದ್ದೇವೆ. ಹಿರಿಯ ಶೂಟರ್‌ಗಳ ಮೇಲೆ ಇರಬೇಕಾದ ನಿರೀಕ್ಷೆಗಳನ್ನು ಅವರ ಮೇಲೆ ಇಡಲಾಗಿದೆ. ಆದರೆ, ಈ ಬೆಳವಣಿಗೆಯು ಅವರ ಸಹಜ ಆಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ಒತ್ತಡದಲ್ಲಿ ಆಡಬೇಕಾಗುತ್ತದೆ’ ಎಂದು ಜಸ್ಪಾಲ್‌ ಅಭಿಪ್ರಾಯಪಟ್ಟಿದ್ದಾರೆ.

‘ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಎಲ್ಲ ಸಾಮರ್ಥ್ಯ ಇವರಿಬ್ಬರಲ್ಲಿದೆ. ಆದರೆ, ಕಾಮನ್‌ವೆಲ್ತ್‌ಗಿಂತಲೂ ಇದರಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ನಿರೀಕ್ಷೆಗಳು ಹೆಚ್ಚಾದಾಗ ಅವುಗಳನ್ನು ತಲುಪಲು ಕ್ರೀಡಾಪಟುಗಳು ಕೆಲವೊಮ್ಮೆ ವಿಫಲರಾಗುತ್ತಾರೆ. ಇದು ಅವರ ಸಾಮರ್ಥ್ಯ ಕುಗ್ಗಲು ಕಾರಣವಾಗಬಹುದು’ ಎಂದು ಅವರು ತಿಳಿಸಿದ್ದಾರೆ.

ಸದ್ಯ ಭಾನವಾಲಾ ಅವರು ಹಿರಿಯ ಶೂಟರ್‌ಗಳ ತಂಡದೊಂದಿಗೆ ಅಭ್ಯಾಸ ನಡೆಸಿದ್ದಾರೆ. ಜೂನಿಯರ್‌ ಶೂಟರ್‌ಗಳ ತಂಡದ ರಾಷ್ಟ್ರೀಯ ಕೋಚ್‌ ಆದ ಜಸ್ಪಾಲ್‌ ರಾಣಾ ಅವರ ಮಾರ್ಗದರ್ಶನದಲ್ಲಿ ಮನು ಅವರು ತರಬೇತಿ ಪಡೆಯುತ್ತಿದ್ದಾರೆ. 

ಇದೇ ತಿಂಗಳ 18ರಿಂದ ಇಂಡೊನೇಷ್ಯಾದಲ್ಲಿ ಏಷ್ಯನ್‌ ಕ್ರೀಡಾಕೂಟವು ಆರಂಭವಾಗಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !