ಸೋನಿಪತ್: ರಾಷ್ಟ್ರೀಯ ಜೂನಿಯರ್ ಬಾಲಕಿಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹರಿಯಾಣದ ಮಾಹಿ ರಾಘವ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಬುಧವಾರ ನಡೆದ 63 ಕೆಜಿ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು ದೆಹಲಿಯ ಗಾರ್ಗಿ ತೋಮರ್ ಅವರನ್ನು ಮಣಿಸಿದರು. ಕಳೆದ ವರ್ಷ ಸ್ವೀಡನ್‌ನಲ್ಲಿ ನಡೆದ ಗೋಲ್ಡನ್ ಗರ್ಲ್ ಚಾಂಪಿಯನ್‌ಷಿಪ್‌ನಲ್ಲಿ ಮಾಹಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

ಹರಿಯಾಣದ ತನು (52 ಕೆಜಿ ವಿಭಾಗ), ರುದ್ರಿಕಾ (70 ಕೆಜಿ), ಸಂಜನಾ (80 ಕೆಜಿ) ಕೂಡ ತಮ್ಮ ಬೌಟ್‌ಗಳಲ್ಲಿ ಜಯ ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ಮಹಾರಾಷ್ಟ್ರದ ಮೂವರು ಬಾಕ್ಸರ್‌ಗಳೂ ಮಂಗಳವಾರ ಮೊದಲ ಸುತ್ತುಗಳಲ್ಲಿ ಜಯ ಸಾಧಿಸಿದ್ದರು. 57 ಕೆಜಿ ವಿಭಾಗದಲ್ಲಿ ಸೃಷ್ಟಿ ರಾಸ್ಕರ್, 63 ಕೆಜಿ ವಿಭಾಗದಲ್ಲಿ ಸನಾ ಗೊನ್ಸಾಲ್ವೆಸ್ ಮತ್ತು 70 ಕೆಜಿ ವಿಭಾಗದಲ್ಲಿ ಜಾಗೃತಿ ಬೋತ್ ಗೆಲುವು ಸಾಧಿಸಿದವರು.

ಏಷ್ಯನ್ಯುವ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ಗೆ ಆಯ್ಕೆ ಟ್ರಯಲ್ಸ್ ಆಗಿಯೂ ಈ ಟೂರ್ನಿಯನ್ನು ಪರಿಗಣಿಸಲಾಗುತ್ತಿದೆ.

ಆಗಸ್ಟ್ 17ರಿಂದ 31ರವರೆಗೆ ದುಬೈನಲ್ಲಿ ಏಷ್ಯನ್ ಚಾಂಪಿಯನ್‌ಷಿಪ್ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.