ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಕ್ರಿಸ್ಟಿನಾಗೆ ಮನೀಷಾ ‘ಗುದ್ದು’

ಮಗಳ ಬೌಟ್‌ ವೀಕ್ಷಿಸಿದ ತಾಯಿ, ಅಜ್ಜಿ
Last Updated 16 ನವೆಂಬರ್ 2018, 16:10 IST
ಅಕ್ಷರ ಗಾತ್ರ

ನವದೆಹಲಿ: ಬಾಕ್ಸಿಂಗ್ ರಿಂಗ್‌ನಲ್ಲಿ ಮಗಳು ಕಾದಾಡುತ್ತಿದ್ದರೆ, ಗ್ಯಾಲರಿಯಲ್ಲಿ ಕುಳಿತಿದ್ದ ತಾಯಿ ಭಾವುಕಳಾಗಿದ್ದಳು. ಮಗಳ ಮುಖದ ಮೇಲೆ ಗುದ್ದು ಬಿದ್ದಾಗಲೆಲ್ಲ ಬೆಚ್ಚಿ ಬೀಳುತ್ತಿದ್ದಳು ಆಕೆ. ಆದರೆ ಮಗಳು ತಿರುಗೇಟು ನೀಡುತ್ತಿದ್ದಾಗ ಆಕೆಯ ಮುಖದಲ್ಲಿ ಸಂತಸ ಮೂಡುತ್ತಿತ್ತು.

ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅಮೆರಿಕದ ಕ್ರಿಸ್ಟಿನಾ ಕ್ರೂಸ್ ಅವರನ್ನು ಮಣಿಸಿದ ಮನೀಷಾ ಮೋನ್‌ ಅವರ ಬೌಟ್ ವೀಕ್ಷಿಸಿದ ತಾಯಿ ಉಷಾ ರಾಣಿ ಮೋನ್‌ ಬೌಟ್‌ನ ಕೊನೆಯಲ್ಲಿ ಸಂಭ್ರಮದ ಅಲೆಯಲ್ಲಿ ತೇಲಿದರು. ಅಜ್ಜಿ ಸರೋಜ್ ದೇವಿ ಕೂಡ ಬೌಟ್ ವೀಕ್ಷಿಸಿದರು.

2016ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕ್ರಿಸ್ಟಿನಾ ಅವರೊಂದಿಗಿನ ಭಾರತದ ಬಾಕ್ಸರ್‌ನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಎದುರಾಳಿಯ ದಾಳಿಗೆ ಬೆದರದೆ ದಿಟ್ಟ ಹೋರಾಟ ನಡೆಸಿದ ಮನೀಷ ಗೆದ್ದು ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು.

ಹರಿಯಾಣದ ಕೈತಾಲ್‌ ಗ್ರಾಮದಿಂದ ಬಂದಿದ್ದ ಉಷಾ ರಾಣಿ ‘ಇದು ಪರಸ್ಪರ ಗುದ್ದುತ್ತ ಕಾದಾಡುವ ಕ್ರೀಡೆ. ಆದ್ದರಿಂದ ಮನೀಷಾ ರಿಂಗ್‌ನಲ್ಲಿದ್ದಾಗಲೆಲ್ಲ ನಮಗೆ ಆತಂಕ ಕಾಡುತ್ತಿರುತ್ತದೆ. ಗೆದ್ದಾಗ ಖುಷಿಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT