ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯವು ನಗರದಲ್ಲಿ ಈಚೆಗೆ ಆಯೋಜಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ನವೀನ ತಂತ್ರಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು.

ಆ ಪ್ರಾತ್ಯಕ್ಷಿಕೆಗಳನ್ನು ಕುತೂಹಲದಿಂದ ವೀಕ್ಷಿಸಿ, ಅವುಗಳ ಕಾರ್ಯಾಚರಣೆ ಹಾಗೂ ಅನುಕೂಲಗಳ ಬಗ್ಗೆ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷಕರು ತಿಳಿದುಕೊಂಡರು. ವೈವಿಧ್ಯಮಯವಾಗಿ ಕಾರ್ಯ ನಿರ್ವಹಿಸುವ ರೋಬೋಟ್‍ಗಳು ನೋಡುಗರ ಕಣ್ಮನ ಸೆಳೆದವು.

ರಸ್ತೆಗಳಲ್ಲಿನ ಅಡೆತಡೆಗಳ ನಿವಾರಣೆ, ಬೃಹತ್ ವಸ್ತುಗಳ ಸುಲಭ ಸಾಗಣೆ, ಮೊಬೈಲ್ ನಿಯಂತ್ರಿತ ರೊಬೋಟ್‍ಗಳು ನೋಡುಗರ ಆಕರ್ಷಣೆ ಗಿಟ್ಟಿಸಿದವು. ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಸಾಯನ್, ಅರ್ಚಿತ್, ರೊನಕ್ ಮತ್ತು ಸಾಯಿಪ್ರಸಾದ್, ರೋಬೊಟ್‍ ತಂತ್ರಾಂಶಗಳು ಮುಂದಿನ ಪೀಳಿಗೆಯಲ್ಲಿ ಸ್ವಯಂಚಾಲಿತ ವಾಹನಗಳ ನಿರ್ಮಾಣಕ್ಕೆ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ಪ್ರಣವ್, ಸೌರಶಕ್ತಿ ಆಧಾರಿತ ವಾಹನ ಪ್ರದರ್ಶಿಸಿದ. ಈ ವಾಹನವು ಸೌರ ಶಕ್ತಿ ಸೇರಿದಂತೆ ರಸ್ತೆಯ ಮೇಲಿನ ಶಾಖವನ್ನು ಹೀರಿಕೊಂಡು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತದೆ ಎಂದು ಆತ ತಿಳಿಸಿಕೊಟ್ಟ. ‌ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿ ಆನಂದ್, ಸ್ವಯಂಚಾಲಿತ ರೈಲ್ವೆ ಕ್ರಾಸಿಂಗ್ ನಿರ್ವಹಣೆ ಮಾಡಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅದರ ಪರಿಚಯ ನೀಡಿದ.

ಭಾವಿ ಎಂಜಿನಿಯರ್‌ಗಳು ರೊಬೋಟಿಕ್ಸ್, ಸಂವಹನ, ವಿದ್ಯುತ್ ಉತ್ಪಾದನೆ, ಗ್ರಾಮೀಣ ತಂತ್ರಜ್ಞಾನ, ಪ್ರೋಗ್ರಾಮಿಂಗ್, ನೀರು ಶುದ್ಧೀಕರಣ ಸೇರಿದಂತೆ ಅನೇಕ ವಿಚಾರಗಳಿಗೆ ಸಂಬಂಧಪಟ್ಟಂತಹ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಆ ಬಗ್ಗೆ ಪ್ರಾತ್ಯಕ್ಷಿಕೆಯ ಮಾದರಿಗಳನ್ನು  ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT