ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌: ರಾಜ್ಯಕ್ಕೆ ಆರು ಪದಕ

Last Updated 22 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತಮ ಪ್ರದರ್ಶನ ಮುಂದು ವರಿಸಿರುವ ಕರ್ನಾಟಕದ ಸೈಕ್ಲಿಸ್ಟ್‌ಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆ ಯುತ್ತಿರುವ 23ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಆರು ಪದಕಗಳನ್ನು ಬಾಚಿಕೊಂಡರು.

18 ವರ್ಷದ ಒಳಗಿನವರ ಬಾಲಕರ 30 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ಬಾಗಲಕೋಟೆ ಜಿಲ್ಲೆ ತುಳಸಿಗೇರಿ ಗ್ರಾಮದ ವೆಂಕಪ್ಪ ಕೆಂಗಲಗುತ್ತಿ 41 ನಿಮಿಷ 52.123 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದರು. ಇದೇ ಸ್ಪರ್ಧೆಯಲ್ಲಿ ವಿಜಯಪುರ ಸರ್ಕಾರಿ ಸೈಕ್ಲಿಂಗ್‌ ವಸತಿ ನಿಲಯದ ವಿಶ್ವನಾಥ ಗಡಾದ 42 ನಿಮಿಷ 00.356 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚು ಜಯಿಸಿದರು.

ಇದೇ ವಯೋಮಾನದ ಬಾಲಕಿ ಯರ 15 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ವಿಜಯಪುರ ವಸತಿ ನಿಲಯದ ಸಾವಿತ್ರಿ ಹೆಬ್ಬಾಳಟ್ಟಿ ಬೆಳ್ಳಿ ಜಯಿಸಿದರು. ಗುರಿ ಮುಟ್ಟಲು 24 ನಿಮಿಷ 41.762 ಸೆಕೆಂಡ್‌ ತೆಗೆದುಕೊಂಡರು.

ಇದೇ ವಯೋಮಾನದ 40 ಕಿ.ಮೀ. ಟೈಮ್‌ ಟ್ರಯಲ್ಸ್‌ನ ತಂಡ ವಿಭಾಗದಲ್ಲಿ ಕರ್ನಾಟಕ ತಂಡ ಕಂಚು ಜಯಿಸಿತು. ವೆಂಕಪ್ಪ ಕೆಂಗಲಗುತ್ತಿ, ವಿಶ್ವನಾಥ ಗಡಾದ, ಅಭಿಷೇಕ ಮರನೂರ ಮತ್ತು ಕೆ.ವಿ. ವೈಶಾಖ ಅವರಿದ್ದ ರಾಜ್ಯ ತಂಡ 53 ನಿಮಿಷ 41.770 ಸೆಕೆಂಡ್‌ಗಳಲ್ಲಿ ಮುಟ್ಟಿತು.

ಪುರುಷರ 40 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ಬೆಂಗಳೂರಿನ ನವೀನ್ ಜಾನ್ ಈ ಬಾರಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡರು. ಹಿಂದಿನ ನಾಲ್ಕೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ನವೀನ್‌ 54 ನಿಮಿಷ 18.315 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

23 ವರ್ಷದ ಒಳಗಿನವರ ವಿಭಾಗ ದಲ್ಲಿ ಬೀಳಗಿ ತಾಲ್ಲೂಕಿನ ಟಕ್ಕಳಕಿ ಗ್ರಾಮದ ರಾಜು ಬಾಟಿ 56 ನಿಮಿಷ 01.358 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು.

ಇದರಿಂದ ಕರ್ನಾಟಕ ಒಟ್ಟು ಹತ್ತು ಪದಕಗಳನ್ನು ಜಯಿಸಿದಂತಾಯಿತು. ಮೊದಲ ದಿನ ನಾಲ್ಕು ಪದಕ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT