ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಷನ್ಸ್ ಕಪ್‌ ಟೂರ್ನಿ: 4 ಬೆಳ್ಳಿ ಗೆದ್ದ ಭಾರತದ ಬಾಕ್ಸರ್‌ಗಳು

Last Updated 21 ಜನವರಿ 2020, 13:50 IST
ಅಕ್ಷರ ಗಾತ್ರ

ನವದೆಹಲಿ: ಸರ್ಬಿಯಾದ ಸೊಂಬರ್‌ನಲ್ಲಿ ನಡೆಯುತ್ತಿರುವ ನೇಷನ್ಸ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ನಾಲ್ಕು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

54 ಕೆ.ಜಿ. ವಿಭಾಗದಲ್ಲಿ ಎಂ.ಮೀನಾ ಕುಮಾರಿ, 75 ಕೆ.ಜಿ. ವಿಭಾಗದಲ್ಲಿ ಭಾಗ್ಯಬಾಟಿ ಕಛಾರಿ, 51 ಕೆ.ಜಿ. ವಿಭಾಗದಲ್ಲಿ ರಿತು ಗ್ರೆವಾಲ್‌ ಮತ್ತು 48 ಕೆ.ಜಿ. ವಿಭಾಗದಲ್ಲಿ ಮೋನಿಕಾ ಪದಕ ಸಾಧನೆ ಮಾಡಿದರು.

ಪವಿತ್ರ ಮತ್ತು ಪ್ವಿಲಾವೊ ಬಸುಮತಾರಿ ಕ್ರಮವಾಗಿ60 ಮತ್ತು 64 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.

ಕಳೆದ ವರ್ಷ ಜರ್ಮನಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಚಿನ್ನಗೆದ್ದಿದ್ದ ಹಾಗೂ ಏಷಿಯನ್ ಚಾಂಪಿಯನ್ ಮೀನಾ ಕುಮಾರಿ ಇಟಲಿಯ ಜಿಯೊರ್ಡಾನ ಸರ್ರೆಂಟಿನೊ ವಿರುದ್ಧ 1–4 ರಿಂದ ಸೋಲು ಕಂಡರು.

ಮೋನಿಕಾ ಲುಲಿಯಾ ಚುಮ್ಗಾಲಕೊವ ವಿರುದ್ಧ ಮತ್ತು ರಿತು ಚೀನಾದ ಚಾಯ್ ಯಾನ್‌ ವಿರುದ್ಧ ಸೋಲು ಅನುಭವಿಸಿದರು.ಕಚಾರಿ ಮೊರಾಕ್ಕೋದ ಖದಿಜಾ ಮರ್ಡಿಗೆ ಮಣಿದರು.

ಬಸುಮತಾರಿಕ್ರೊವೇಷ್ಯಾದ ಸಾರಾ ಕೊಸ್‌ ವಿರುದ್ಧಸೆಮಿಫೈನಲ್‌ನಲ್ಲಿ ಸೆಣಸುತ್ತಿದ್ದಾಗ ಮೂರನೇ ರೌಂಡ್‌ನಲ್ಲಿ ಸ್ಪರ್ಧೆಯಿಂದ ಅನರ್ಹರಾದರು. ಪವಿತ್ರ ಇಟಲಿಯ ರೆಬೆಕ್ಕಾ ನಿಕೊಲಿಗೆ ಕಠಿಣ ಪೈಪೋಟಿ ನೀಡಿದರಾದರೂ 2–3 ಅಂತರದಿಂದ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT