ಗುರುವಾರ , ಜೂನ್ 24, 2021
27 °C
2023ರ ವಿಶ್ವಕಪ್‌ ಟೂರ್ನಿಯ ಸಿದ್ಧತೆಯ ಭಾಗವಾಗಿ ಸುಂದರ್‌ಗರ್ ಜಿಲ್ಲೆಯ ರೋರ್ಕೆಲಾದಲ್ಲಿ ನಿರ್ಮಾಣ

ರೋರ್ಕೆಲಾದಲ್ಲಿ ವಿಶ್ವದರ್ಜೆಯ ಹಾಕಿ ಕ್ರೀಡಾಂಗಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಭಾರತದ ಹಾಕಿ ಕೇಂದ್ರವಾದ ಒಡಿಶಾದಲ್ಲಿ ವಿಶ್ವದರ್ಜೆಯ ಹಾಕಿ ಕ್ರೀಡಾಂಗಣ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. 2023ರ ಹಾಕಿ ವಿಶ್ವಕಪ್‌ ಟೂರ್ನಿಯ ಸಿದ್ಧತೆಯ ಭಾಗವಾಗಿ ಸುಂದರ್‌ಗರ್ ಜಿಲ್ಲೆಯ ರೋರ್ಕೆಲಾದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ನವೀನ್ ‍ಪಟ್ನಾಯಕ್ ಗುರುವಾರ ತಿಳಿಸಿದರು. ಟೂರ್ನಿಯ ಪಂದ್ಯಗಳು ಭುವನೇಶ್ವರ ಮತ್ತು ರೋರ್ಕೆಲಾದಲ್ಲಿ ನಡೆಯಲಿವೆ. 

‘ಉದ್ದೇಶಿತ ಕ್ರೀಡಾಂಗಣವು ಭಾರತದಲ್ಲೇ ಅತಿದೊಡ್ಡ ಕ್ರೀಡಾಂಗಣ ಆಗಲಿದ್ದು 20 ಸಾವಿರ ಆಸನ ವ್ಯವಸ್ಥೆ ಇರುತ್ತದೆ. ಈ ಭಾಗದ ಕ್ರೀಡಾ ಭೂಪಟವನ್ನೇ ಇದು ಬದಲಿಸಲಿದೆ. ವಿಶ್ವದ ವಿವಿಧ ಭಾಗಗಲ್ಲಿರುವ ಪ್ರಮುಖ ಕ್ರೀಡಾಂಗಣಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುವುದು. ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ, 15 ಎಕರೆ ಜಾಗದಲ್ಲಿ ಇದು ನಿರ್ಮಾಣವಾಗಲಿದೆ’ ಎಂದು ನವೀನ್ ವಿವರಿಸಿದರು.

‘ದೇಶದ ಹಾಕಿಪಟುಗಳ ಶಕ್ತಿಕೇಂದ್ರವಾಗಿ ಸುಂದರ್‌ಗರ್ ಜಿಲ್ಲೆ ಮಾರ್ಪಟ್ಟಿದೆ. ಅಲ್ಲಿನ ಅನೇಕ ಹಾಕಿ ಆಟಗಾರರು ದೇಶವನ್ನು ಪ್ರತಿನಿಧಿಸಿದ್ದಾರೆ. ಭಾರತ ತಂಡವನ್ನು ಮುನ್ನಡೆಸಿದ್ದ ದಿಲೀಪ್ ಟರ್ಕಿ ಮತ್ತು ಸುನಿತಾ ಲಾಕ್ರಾ ಅದೇ ಜಿಲ್ಲೆಯವರು. ಆ ಜಿಲ್ಲೆಯ ಮೂಲೆ ಮೂಲೆಗಳನ್ನೂ ಹಾಕಿ ಆಡುವುದನ್ನು ಕಾಣಬಹುದಾಗಿದೆ. ಅಲ್ಲಿನ ಜನರು ಈ ಕ್ರೀಡೆಗೆ ನೀಡುವ ಪ್ರೋತ್ಸಾಹವನ್ನು ವಿಶ್ವದ ಅಪರೂಪದ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ’ ಎಂದು ಅವರು ಹೇಳಿದರು. 

ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿಯು ಈಚೆಗೆ ಪರಿಶೀಲನೆ ನಡೆಸಿದೆ. ಅಂತರರಾಷ್ಟ್ರೀಯ ಹಾಕಿ ಫೆಡರೇಷನ್, ಹಾಕಿ ಇಂಡಿಯಾ ಮತ್ತು ಕೇಂದ್ರ ಕ್ರೀಡಾ ಇಲಾಖೆಯ ಅಧಿಕಾರಿಗಳು ಕೂಡ ಇದ್ದರು. ಸಿಂಥೆಟಿಕ್ ಹಾಕಿ ಟರ್ಫ್ ಅಳವಡಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು