ಕ್ವಾರ್ಟರ್‌ನಲ್ಲಿ ಪ್ರಣಯ್‌ಗೆ ಸೋಲು

ಶುಕ್ರವಾರ, ಮೇ 24, 2019
25 °C
ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಭಾರತದ ಸವಾಲು ಅಂತ್ಯ

ಕ್ವಾರ್ಟರ್‌ನಲ್ಲಿ ಪ್ರಣಯ್‌ಗೆ ಸೋಲು

Published:
Updated:
Prajavani

ಆಕ್ಲೆಂಡ್‌: ಭಾರತದ ಎಚ್‌.ಎಸ್‌.ಪ್ರಣಯ್‌ ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರ ಬಿದ್ದಿದ್ದು, ಇದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಿದೆ. 

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪ್ರಣಯ್‌ ಜಪಾನ್‌ನ ಕಾಂತಾ ಟ್ಸುನೀಮಾ ಅವರಿಗೆ 21–17, 15–21, 14–21ರಿಂದ ಮಣಿದರು.

ಆರಂಭದಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದ ಪ್ರಣಯ್‌ ಮೊದಲ ಗೇಮ್‌ನಲ್ಲಿ 17–13ರ ಮುನ್ನಡೆ ಸಾಧಿಸಿದರು. ಈ ವೇಳೆ ಪುಟಿದೆದ್ದ ಟ್ಸುನೀಮಾ ಸತತ ನಾಲ್ಕು ಪಾಯಿಂಟ್ಸ್ ಗಳಿಸಿ ಆತಂಕ ಮೂಡಿಸಿದರು. ಆದರೆ ಪಟ್ಟು ಬಿಡದ ಪ್ರಣಯ್‌ ಗೇಮ್‌ ಗೆದ್ದರು. 

ಎರಡನೇ ಗೇಮ್‌ನ ಆರಂಭದಲ್ಲಿ ಪ್ರಣಯ್‌ 4–0ಯಿಂದ ಮುನ್ನಡೆದಿದ್ದರು. ಆದರೆ, ಟ್ಸುನೀಮಾ ಆಕ್ರಮಣಕಾರಿ ಆಟವಾಡಿ ಗಮನ ಸೆಳೆದರು. ಅಂತಿಮವಾಗಿ ಗೇಮ್‌ ಗೆದ್ದು ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದರು. ಮೂರನೇ ಗೇಮ್‌ನಲ್ಲಿ ಉಭಯ ಆಟಗಾರರ ನಡುವೆ ಭಾರಿ ಪೈಪೋಟಿ ಕಂಡುಬಂದಿತು. ಒಂದು ಹಂತದಲ್ಲಿ ಸ್ಕೋರು 14–14ರಲ್ಲಿ ಸಮವಾಗಿತ್ತು. ನಂತರ ಅಮೋಘ ಆಟವಾಡಿದ ಜಪಾನ್ ಆಟಗಾರ ಗೇಮ್ ಮತ್ತು ಪಂದ್ಯ ಗೆದ್ದು ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !