ಮಂಗಳವಾರ, ಸೆಪ್ಟೆಂಬರ್ 17, 2019
27 °C

ರಾಷ್ಟ್ರೀಯ ಕಾರ್ಟಿಂಗ್‌: ರುಹಾನ್‌ಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಕರ್ನಾಟಕದ ರುಹಾನ್‌ ಆಳ್ವಾ ಅವರು ಜೆ.ಕೆ.ಟಯರ್‌–ಎಫ್‌.ಎಂ.ಎಸ್‌.ಸಿ.ಐ. ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ನಡೆದ ಎಕ್ಸ್‌–30 ಕ್ಲಾಸ್‌ ಸ್ಪರ್ಧೆಯಲ್ಲಿ ಬೆಂಗಳೂರಿನ ರುಹಾನ್‌, ಅಮೋಘ ಚಾಲನಾ ಕೌಶಲ ಮೆರೆದರು. ಐದು ಸುತ್ತುಗಳಿಂದ ಒಟ್ಟು 164 ಪಾಯಿಂಟ್ಸ್‌ ಕಲೆಹಾಕಿದರು. ಜೊತೆಗೆ ಮುಂದಿನ ತಿಂಗಳು ಫ್ರಾನ್ಸ್‌ನಲ್ಲಿ ನಡೆಯುವ ವಿಶ್ವ ಕಾರ್ಟಿಂಗ್‌ ಫೈನಲ್ಸ್‌ಗೂ ಅರ್ಹತೆ ಪಡೆದರು.

ಬೆಂಗಳೂರಿನವರೇ ಆದ ಅರ್ಜುನ್‌ ನಾಯರ್‌ (134 ಪಾಯಿಂಟ್ಸ್‌) ಮತ್ತು ಚೆನ್ನೈಯ ರ‍್ಯಾನ್‌ ಮೊಹಮ್ಮದ್‌ (91 ಪಾ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಕೆಡೆಟ್‌ ವಿಭಾಗದಲ್ಲಿ ಬೆಂಗಳೂರಿನ ಇಶಾನ್‌ ಮಾದೇಶ್‌ ಚಾಂಪಿಯನ್‌ ಆದರು. ಅವರು ಒಟ್ಟು 189 ಪಾಯಿಂಟ್ಸ್‌ ಕಲೆಹಾಕಿದರು.

ಸೀನಿಯರ್‌ ವಿಭಾಗದಲ್ಲಿ ಚೆನ್ನೈಯ ನಿರ್ಮಲ್‌ ಉಮಾಶಂಕರ್‌ ಪ್ರಶಸ್ತಿ ಜಯಿಸಿದರು. ಅವರು 160 ಪಾಯಿಂಟ್ಸ್‌ ಗಳಿಸಿದರು. ಬೆಂಗಳೂರಿನ ಆದಿತ್ಯ ಸ್ವಾಮಿನಾಥನ್‌ (101 ಪಾ.) ಎರಡನೇ ಸ್ಥಾನ ಪಡೆದರು. ಬಾಲ ಪ್ರಶಾಂತ್‌ (71 ಪಾ.) ಅವರು ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

Post Comments (+)