ಮಂಗಳವಾರ, ಅಕ್ಟೋಬರ್ 22, 2019
21 °C
18 ವರ್ಷದೊಳಗಿನವರ ಫುಟ್‌ಬಾಲ್ ತಂಡದ ಸಾಧನೆ

ಭಾರತಕ್ಕೆ ಸ್ಯಾಫ್ ಗರಿ

Published:
Updated:
Prajavani

ನವದೆಹಲಿ: ಭಾರತದ 18 ವರ್ಷದೊಳಗಿನವರ ಫುಟ್‌ಬಾಲ್ ತಂಡವು ಭಾನುವಾರ ಸ್ಯಾಫ್ ಪ್ರಶಸ್ತಿ ಗೆದ್ದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಭಾರತ ಯುವಪಡೆಯು 2–1 ಗೋಲುಗಳಿಂದ ಬಾಂಗ್ಲಾದೇಶ ತಂಡದ ವಿರುದ್ಧ ಗೆದ್ದಿತು. 

ಪಂದ್ಯದ ಎರಡನೇ ನಿಮಿಷದಲ್ಲಿಯೇ ಭಾರತದ ವಿಕ್ರಂ ಪ್ರತಾಪ್ ಸಿಂಗ್ ಭಾರತ ತಂಡಕ್ಕೆ ಮೊದಲ ಗೋಲಿನ ಕಾಣಿಕೆ ಕೊಟ್ಟರು. 1–0 ಮುನ್ನಡೆ ಗಳಿಸಿದ ತಂಡವು ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟಿತು.

ಆದರೆ, 40ನೇ ನಿಮಿಷದಲ್ಲಿ ಬಾಂಗ್ಲಾದೇಶದ ಯಾಸಿನ್ ಅರಾಫತ್ ಗೋಲು ಹೊಡೆದು ಸಮಬಲಕ್ಕೆ ತಂದರು. ಆಗ ಮತ್ತೆ ತುರುಸಿನ ಹೋರಾಟ ಆರಂಭವಾಯಿತು. ಈ ಹಂತದಲ್ಲಿ ಭಾರತದ ಗುರುಕೀರತ್ ಸಿಂಗ್, ಬಾಂಗ್ಲಾದ ಮೊಹ್ಮದ್ ಫಾಹಿಮ್ ಮತ್ತು ಯಾಸಿನ್ ಅವರು ಕೆಂಪು ಕಾರ್ಡ್ ದರ್ಶನ ಮಾಡಿದರು.ರವಿ ಬಹಾದ್ದೂರ್ ರಾಣಾ (90+1ನಿ) ಮೇಲುಗೈ ಸಾಧಿಸಿದರು. ಇದರೊಂದಿಗೆ ಭಾರತಕ್ಕೆ ಪ್ರಶಸ್ತಿ ಒಲಿಯಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)