ಹೆಂಗೆಲೊ, ನೆದರ್ಲೆಂಡ್ಸ್: ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ನೆದರ್ಲೆಂಡ್ಸ್‌ನ ಸಿಫಾನ್ ಹಸನ್ ಮಹಿಳೆಯರ 10 ಸಾವಿರ ಮೀಟರ್ಸ್ ಓಟದಲ್ಲಿ ವಿಶ್ವದಾಖಲೆ ಬರೆದರು. 28 ವರ್ಷದ ಸಿಫಾನ್ ಭಾನುವಾರ ನಡೆದ ಹೆಂಗೆಲೊ ಕ್ರೀಡಾಕೂಟದಲ್ಲಿ 29 ನಿಮಿಷ, 6.82 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಇಥಿಯೋಪಿಯಾದ ಅಲ್ಮಾಜ್ ಅಯಾನ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ 29 ನಿಮಿಷ 17.45 ಸೆಕೆಂಡುಗಳಲ್ಲಿ ಗುರಿಮುಟ್ಟಿ ದಾಖಲೆ ಬರೆದಿದ್ದರು. ಅದನ್ನು ಸಿಫಾನ್ ಹಿಂದಿಕ್ಕಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಕೆಲವೇ ವಾರಗಳು ಉಳಿದಿರುವಾಗ ಈ ದಾಖಲೆ ಮೂಡಿಬಂದಿದೆ.

‘ಅಬ್ಬ...ಇದು ಕನಸೋ ನನಸೋ ಎಂದು ಗೊತ್ತಾಗುತ್ತಿಲ್ಲ. ಇಲ್ಲಿ ದಾಖಲೆಯ ಓಟ ಓಡಲು ಸಾಧ್ಯವಾದದ್ದು ಖುಷಿ ತಂದಿದೆ’ ಎಂದು ಅವರು ಹೇಳಿದರು. ಇಥಿಯೋಪಿಯಾದಲ್ಲಿ ಜನಿಸಿದ ಸಿಫಾನ್ 2008ರಲ್ಲಿ 15ನೇ ವಯಸ್ಸಿನಲ್ಲಿ ಇಲ್ಲಿಗೆ ಬಂದಿದ್ದರು. 2013ರಲ್ಲಿ ಅವರಿಗೆ ಇಲ್ಲಿನ ನಾಗರಿಕತ್ವ ನೀಡಲಾಗಿತ್ತು. ಈಗ ನಿಷೇಧಕ್ಕೊಳಗಾಗಿರುವ ಆಲ್ಬರ್ಟೊ ಸಲಾಜರ್ ಬಳಿ ತರಬೇತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.