ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧುಗೆ ಗೆಲುವಿನ ಆರಂಭ

ಅಶ್ವಿನಿ–ಸಿಕ್ಕಿ ರೆಡ್ಡಿ ಜೋಡಿಗೆ ಗೆಲುವು; ಕಿದಂಬಿ ಶ್ರೀಕಾಂತ್‌, ಕಶ್ಯಪ್‌ಗೆ ಆಘಾತ
Last Updated 17 ಮಾರ್ಚ್ 2021, 21:49 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ವಿಶ್ವಚಾಂಪಿಯನ್, ಭಾರತದ ಪಿ.ವಿ. ಸಿಂಧು ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನಲ್ಲಿ ಪಂದ್ಯದಲ್ಲಿ ಅವರು 21–11, 21–17ರಿಂದ ಮಲೇಷ್ಯಾದ ಸೋನಿ ಚೀಹ ಅವರನ್ನು ಮಣಿಸಿದರು.

ಅಪಘಾತದಲ್ಲಿ ಗಂಭೀರ ಗಾಯ ಗೊಂಡು ಒಂದು ವರ್ಷದ ನಂತರ ಕಣಕ್ಕೆ ಇಳಿದ ಜಪಾನ್‌ನ ಕೆಂಟೊ ಮೊಮೊಟ 21–13, 22–2ರಿಂದ ಭಾರ ತದ ಪರುಪಳ್ಳಿ ಕಶ್ಯಪ್‌ ಅವರಿಗೆ ಆಘಾತ ನೀಡಿದರು. ಎಂಟನೇ ಶ್ರೇಯಾಂಕದ ಶ್ರೀಕಾಂತ್ ಅವರನ್ನು ಶ್ರೇಯಾಂಕರಹಿತ ಐರ್ಲೆಂಡ್ ಆಟಗಾರ ನುಗ್ಯೆನ್ ನ್ಹಾಟ್‌ 21–11, 15–21, 21–12ರಲ್ಲಿ ಮಣಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಥಾಯ್ಲೆಂಡ್‌ನ ಬೆನ್ಯಪ ಏಮ್ಸರ್ಡ್‌ ಮತ್ತು ನುಂಟಕರ್ನ್ ಏಮ್ಸರ್ಡ್‌ ವಿರುದ್ಧ 21–14, 21–12ರಲ್ಲಿ ಜಯ ಸಾಧಿಸಿದರು.

ದೂರವಾದ ಆತಂಕ; ಸುಗಮವಾದ ಹಾದಿ: ಕೋವಿಡ್‌–19 ಇರುವುದು ದೃಢಪಟ್ಟ ಮೂವರು ಬ್ಯಾಡ್ಮಿಂಟನ್ ಪಟುಗಳ ಮರುಪರೀಕ್ಷೆಯ ವರದಿ ನೆಗೆ ಟಿವ್ ಬಂದಿರುವುದರಿಂದ ಭಾರತದ ಸ್ಪರ್ಧಾಳುಗಳ ಹಾದಿ ಸುಗಮವಾಗಿದೆ. ಮೂವರು ಆಟಗಾರರು ಮತ್ತು ಒಬ್ಬರು ನೆರವು ಸಿಬ್ಬಂದಿಯ ವರದಿ ಮಂಗಳವಾರ ಪಾಸಿಟಿವ್ ಬಂದಿತ್ತು. ಆದರೆ ಬುಧವಾರ ಆಯೋಜಕರ ವತಿಯಿಂದ ನಡೆದ ಪರೀಕ್ಷೆಯ ವರದಿ ಸಮಾಧಾನ ತಂದಿದೆ.

ಎಲ್ಲ ದೇಶಗಳ ತಂಡಗಳ ವ್ಯವಸ್ಥಾಪ ಕರಿಗೆ ಇಮೇಲ್ ಕಳುಹಿಸಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮರು ಪರೀಕ್ಷೆಯಲ್ಲಿ ಎಲ್ಲರ ವರದಿಯೂ ನೆಗೆಟಿವ್ ಬಂದಿದ್ದು ಟೂರ್ನಿ ಆರಂಭಿಸಲು ಯಾವ ಆತಂಕವೂ ಇಲ್ಲ ಎಂದು ಹೇಳಿದೆ. ಸಾಮಾಜಿಕ ತಾಣಗಳ ಮೂಲಕ ಮಾಹಿತಿ ನೀಡಿರುವ ಭಾರತದ ಮುಖ್ಯ ಕೋಚ್‌ ಮಥಾಯಿಸ್ ಬೋಯೆ ‘ತಂಡದಲ್ಲಿ ಯಾರಿಗೂ ಕೋವಿಡ್‌ ಇಲ್ಲ. ನಮ್ಮವರೆಲ್ಲರೂ ಆಡಲು ಸಜ್ಜಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಆತಂಕ ಮತ್ತು ಗೊಂದಲದಿಂದಾಗಿ ಟೂರ್ನಿಯನ್ನು ಕೆಲವು ತಾಸು ತಡವಾಗಿ ಆರಂಭಿಸಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT