ಬುಧವಾರ, ಸೆಪ್ಟೆಂಬರ್ 22, 2021
24 °C
ಸೇಂಟ್‌ ಲೂಯಿಸ್‌ ರ‍್ಯಾಪಿಡ್‌ ಆನ್‌ಲೈನ್ ಚೆಸ್‌ ಟೂರ್ನಿ

ಆನ್‌ಲೈನ್ ಚೆಸ್‌ ಟೂರ್ನಿ: ಜಂಟಿ ಅಗ್ರಸ್ಥಾನದಲ್ಲಿ ಹರಿಕೃಷ್ಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ : ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಸೇಂಟ್ ಲೂಯಿಸ್ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಮೂರು ಸುತ್ತುಗಳ ಬಳಿಕ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಮೂರು ಸುತ್ತುಗಳ ಪೈಕಿ ಎರಡರಲ್ಲಿ ಗೆಲುವು ಹಾಗೂ ಒಂದರಲ್ಲಿ ಡ್ರಾ ಸಾಧಿಸಿರುವ ಅವರು ಆರ್ಮೆನಿಯಾದ ಲೆವೊನ್‌ ಅರೋನಿಯನ್‌ ಜೊತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಅರೋನಿಯನ್‌ ಹಾಗೂ ಹರಿಕೃಷ್ಣ ಬಳಿ ಸದ್ಯ ತಲಾ ಐದು ಪಾಯಿಂಟ್‌‌ಗಳಿವೆ.

ಮಂಗಳವಾರ ತಡರಾತ್ರಿ ನಡೆದ ಟೂರ್ನಿಯ ಮೊದಲ ಸುತ್ತಿನಲ್ಲಿ ಹರಿಕೃಷ್ಣ ಅವರು ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಲೇನಿಯರ್‌ ಡೊಮಿಂಗ್ವೇಜ್ ಅವರನ್ನು ಮಣಿಸಿದರು. ಎರಡನೇ ಪಂದ್ಯದಲ್ಲಿ ಇರಾನ್‌ನ ಅಲಿರೆಜಾ ಫಿರೌಜಾ ಎದುರು ಡ್ರಾ ಮಾಡಿಕೊಂಡರು.

ಮೂರನೇ ಸುತ್ತಿನಲ್ಲಿ ಭಾರತದ ಎರಡನೇ ಕ್ರಮಾಂಕದ ಆಟಗಾರ, ರಷ್ಯಾದ ಅನುಭವಿ ಪಟು ಅಲೆಕ್ಸಾಂಡರ್‌ ಗ್ರಿಶ್ಚುಕ್‌ ಅವರ ಸವಾಲು ಮೀರಿದರು. 41 ನಡೆಗಳಲ್ಲಿ  ಅಲೆಕ್ಸಾಂಡರ್‌ ಅವರಿಗೆ ಸೋಲುಣಿಸಿದರು.

ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಹರಿಕೃಷ್ಣ  ರಷ್ಯಾದ ಇಯಾನ್‌ ನೆಪೊಮ್ನಿಯಾಟ್ಜಿ ವಿರುದ್ಧ ಆಡಲಿದ್ದಾರೆ. ಬಳಿಕ ಅರೋನಿಯನ್‌ ಹಾಗೂ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎದುರಿಸಲಿದ್ದಾರೆ.

ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಮೂರು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು