ಶುಕ್ರವಾರ, ಫೆಬ್ರವರಿ 26, 2021
27 °C
ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್: 100 ಮೀಟರ್ಸ್ ಓಟದಲ್ಲಿ ಮಿಂಚಿದ ಸ್ನೇಹಾ ಪಿ.ಜೆ

ಮೊದಲ ದಿನ ಆರು ಕೂಟ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾ ನದಲ್ಲಿ ಸೋಮವಾರ ಆರಂಭಗೊಂಡ ರಾಜ್ಯ ಮಟ್ಟದ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮೊದಲ ದಿನ ಎಂಟು ಕೂಟ ದಾಖಲೆಗಳಾಗಿದ್ದು, ಆತಿಥೇಯ ಆಳ್ವಾಸ್ ಅಥ್ಲೀಟ್‌ಗಳೇ ಆರು ಕೂಟ ದಾಖಲೆ ಮಾಡಿದ್ದಾರೆ. ಈ ಮೂಲಕ ಮುನ್ನಡೆ ಸಾಧಿಸಿದ್ದಾರೆ.

18 ವರ್ಷದೊಳಗಿನ ಬಾಲಕರ ವಿಭಾಗದ ಡಿಸ್ಕಸ್ ಥ್ರೋದಲ್ಲಿ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ನಾಗೇಂದ್ರ ಅಣ್ಣಪ್ಪ ನಾಯಕ್ 50.69 ಮೀಟರ್ ದೂರ ಎಸೆದು ಗೌತಮ್ ಜಿ. ಅವರ ಹೆಸರಿನಲ್ಲಿದ್ದ (48.20) ದಾಖಲೆಯನ್ನು ಮುರಿದರು.

ಹೈ ಜಂಪ್‌ನಲ್ಲಿ ಇದೇ ಸಂಸ್ಥೆಯ ಎಸ್.ಬಿ ಸುಪ್ರಿಯ 1.75 ಮೀಟರ್ ಜಿಗಿದು ಕಾವ್ಯ ಮುತ್ತಣ್ಣ (1.70) ಅವರ ದಾಖಲೆಯನ್ನು ಅಳಿಸಿ ಹಾಕಿದರು. 20 ವರ್ಷದೊಳಗಿನ ಬಾಲಕರ ವಿಭಾಗದ 800 ಮೀಟರ್ಸ್‌ ಓಟದಲ್ಲಿ ಆಳ್ವಾಸ್‌ನ ಶಶಿಧರ್ ಬಿ.ಎಲ್ 1 ನಿಮಿಷ 53.7 ಸೆಕೆಂಡುಗಳಲ್ಲಿ ಗುರಿಮುಟ್ಟಿ ಜಯಪ್ರಕಾಶ್ ಸಿ. ಶೆಟ್ಟಿಯ ಹೆಸರಿನಲ್ಲಿದ್ದ (1:54.3) ದಾಖಲೆಯನ್ನು ಹಿಂದಿಕ್ಕಿದ್ದಾರೆ. ಹುಡುಗರ ಟ್ರಿಪಲ್ ಜಂಪ್‌ನಲ್ಲಿ ಆಳ್ವಾಸ್‌ನ ಸಂದೇಶ್ ಶೆಟ್ಟಿ 15.54 ಮೀಟರ್ಸ್‌ ಜಿಗಿದು ಅರ್ಷಾದ್ ಎಂ (16.47 ಮೀಟರ್ಸ್‌) ಸಾಧನೆ ಮುರಿದಿದ್ದಾರೆ.

20 ವರ್ಷದೊಳಗಿನ ಪುರುಷರ ವಿಭಾಗದ ಜಾವೆಲಿನ್ ಥ್ರೋದಲ್ಲಿ ಆಳ್ವಾ ಸ್‌ನ ಮನು ಡಿ.ಪಿ 66.82 ಮೀಟರ್ ದೂರ ಎಸೆದು ಶಮಿತ್ ಡಿ. ಸುವರ್ಣ ಹೆಸರಿನಲ್ಲಿದ್ದ 65.01 ದಾಖಲೆಯನ್ನು ಮುರಿದರೆ, ಪೋಲ್‌ ವಾಲ್ಟ್‌ನಲ್ಲಿ ಆಳ್ವಾಸ್‌ನ ಯೋಗೀಶ್ 3.80 ಮೀಟರ್ ದೂರ ಎಸೆದು ಯೋಗೀಶ್ ಜಿ.ಪತ್ಗಾರ್ ಹೆಸರಿನಲ್ಲಿದ್ದ (3.76) ಹಳೆ ದಾಖಲೆಯನ್ನು ಅಳಿಸಿದ್ದಾರೆ. ಶಾಟ್‌ಪಟ್‌ನಲ್ಲಿ ಮೈಸೂರು ಜಿಲ್ಲೆಯ ಮನುಷ್ ಬಿ. 17.70 ಮೀಟರ್ ದೂರ ಎಸೆದು ಜಾಸನ್ ಆರ್.ಸಾಲಿನ್ಸ್ (16.63) ಸಾಧನೆಯನ್ನು ಮುರಿದರೆ 20 ವರ್ಷದೊಳಗಿನ ಮಹಿಳೆಯರ ವಿಭಾಗದ 100 ಮೀಟರ್ಸ್‌ ಓಟವನ್ನು ಬೆಂಗಳೂರಿನ ಅಥ್ಲಾನ್ ಫ್ಲೀಟ್ ಒಲಿಂಪಸ್‌ ಅಕಾಡೆಮಿಯ ಸ್ನೇಹಾ ಪಿ.ಜೆ 11.2 ಸೆಕೆಂಡ್‌ಗಳಲ್ಲಿ ಕ್ರಮಿಸಿ ಎಚ್.ಎಂ ಜ್ಯೋತಿ (11.3) ದಾಖಲೆಯನ್ನು ಮುರಿದಿದ್ದಾರೆ.


ಸ್ನೇಹಾ ಪಿ.ಜೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು