ಕುಸ್ತಿಪಟು ವಿಕಾಸ ಗೌಡ ಸ್ಮರಣಾರ್ಥ 8ರಂದು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ

7
ರಾಷ್ಟ್ರೀಯ ಕುಸ್ತಿಕಲಿ

ಕುಸ್ತಿಪಟು ವಿಕಾಸ ಗೌಡ ಸ್ಮರಣಾರ್ಥ 8ರಂದು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ

Published:
Updated:

ದಾವಣಗೆರೆ: ಜಿಲ್ಲಾ ಕುಸ್ತಿ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಕುಸ್ತಿಪಟು ವಿಕಾಸ ಗೌಡ ಸ್ಮರಣಾರ್ಥ ಸೆಪ್ಟೆಂಬರ್‌ 8ರಂದು ಬೆಳಿಗ್ಗೆ 8ರಿಂದ ನಗರದ ಆಂಜನೇಯ ಬಡಾವಣೆಯ ಕುಸ್ತಿ ಒಳಗಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಕುಸ್ತಿ ಸಂಘದ ಕಾರ್ಯದರ್ಶಿ ಪೈಲ್ವಾನ್‌ ವೀರೇಶ್‌, ‘ದೇಹದ ತೂಕದ ಆಧಾರದಲ್ಲಿ ಕಿರಿಯರ ಹಾಗೂ ಕಿರಿಯರ ವಿಭಾಗಳಲ್ಲಿ ಪಂದ್ಯಗಳು ನಡೆಯಲಿವೆ. 17 ವರ್ಷದೊಳಗಿನ ಕುಸ್ತಿಪಟುಗಳಿಗೆ 30 ಕೆ.ಜಿ, 35 ಕೆ.ಜಿ, 40 ಕೆ.ಜಿ, 50 ಕೆ.ಜಿ. ವಿಭಾಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಹಿರಿಯರ ಕುಸ್ತಿಪಟುಗಳಿಗೆ 57 ಕೆ.ಜಿ, 61 ಕೆ.ಜಿ, 74 ಕೆ.ಜಿ, 86 ಕೆ.ಜಿ, 96 ಕೆ.ಜಿ ಹಾಗೂ 96 ಕೆ.ಜಿ. ಮೇಲಿನವರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಮೈಸೂರು, ಬೆಂಗಳೂರು, ಕಾರವಾರದ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ರೀಡಾನಿಲಯಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿಪಟುಗಳನ್ನು ಕಳುಹಿಸಿಕೊಡಬೇಕು. ಕುಸ್ತಿಪಟುಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಜೊತೆಗೆ ಅತ್ಯುತ್ತಮ ಪ್ರದರ್ಶನ ನೀಡುವ ಕುಸ್ತಿಪಟುವಿಗೆ ವಿಕಾಸ ಗೌಡ ಸ್ಮರಣಾರ್ಥ ಪ್ರತ್ಯೇಕ ಟೈಟಲ್‌ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: 9844466838 ಸಂಪರ್ಕಿಸಬಹುದು ಎಂದು ತಿಳಿಸಿದರು.

ಕುಸ್ತಿ ತರಬೇತುದಾರ ಆರ್‌. ಶಿವಾನಂದ, ಮಂಜುನಾಥ, ಕುಸ್ತಿಪಟುಗಳಾದ ಬಾಹುಬಲಿ, ಪಂಕಜ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !