ಕುಸ್ತಿಪಟುಗಳಿಗೆ ಮ್ಯಾಟ್‌ ಮೇಲೆ ತರಬೇತಿ ಅನಿವಾರ್ಯ-ದೈಹಿಕಶಿಕ್ಷಣಅಧೀಕ್ಷಕ ಮಲ್ಲಪ್ಪ

7
ಬೊಮ್ಮವಾರದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಲ್ಲಪ್ಪ ಅಭಿಮತ

ಕುಸ್ತಿಪಟುಗಳಿಗೆ ಮ್ಯಾಟ್‌ ಮೇಲೆ ತರಬೇತಿ ಅನಿವಾರ್ಯ-ದೈಹಿಕಶಿಕ್ಷಣಅಧೀಕ್ಷಕ ಮಲ್ಲಪ್ಪ

Published:
Updated:
Deccan Herald

ದೇವನಹಳ್ಳಿ: ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಕುಸ್ತಿಪಟುಗಳಿಗೆ ಮ್ಯಾಟ್‌ನೊಂದಿಗೆ ತರಬೇತಿ ಪಡೆಯುವುದು ಅನಿವಾರ್ಯ ಆಗಲಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಲ್ಲಪ್ಪ ತಿಳಿಸಿದರು.

ತಾಲ್ಲೂಕಿನ ಬೊಮ್ಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಡೆದ 14 ಮತ್ತು 17 ವರ್ಷದ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡು ವರ್ಷದಿಂದ ಬಾಲಕಿಯರ ಕುಸ್ತಿ ಪಂದ್ಯಾವಳಿಯನ್ನು ಸೇರಿಸಲಾಗಿದೆ. ಈ ವರ್ಷದಿಂದ ಬಾಲಕಿಯರ ಮತ್ತು ಬಾಲಕರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ಒಂದೇ ಕಡೆ ನಡೆಸಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪಂದ್ಯಾವಳಿ ಆಯೋಜಿಸುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕ್ರೀಡಾಸ್ಫೂರ್ತಿ ಹೆಚ್ಚಲಿದೆ. ಕ್ರೀಡೆ ಸಾಧಕನ ಸ್ವತ್ತೇ ಹೊರತು ಸೋಮಾರಿಯದಲ್ಲ. ನಿರಂತರ ಅಭ್ಯಾಸದಿಂದ ಮಾತ್ರ ಪ್ರತಿಫಲ ಪಡೆಯಲು ಸಾಧ್ಯ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್‌. ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲಕ್ಷ್ಮಿನಾರಾಯಣ, ಮುಖ್ಯ ಶಿಕ್ಷಕ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ಘಟಕ ಅಧ್ಯಕ್ಷ ಬಿ.ಎನ್‌. ಕೃಷ್ಣಪ್ಪ, ನಿವೃತ್ತ ಶಿಕ್ಷಕರಾದ ಅಶ್ವತ್ಥನಾರಾಯಣ, ಮುನಿರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಕೆ. ಮುನಿಯಪ್ಪ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎನ್‌. ನಾಗೇಶ್‌ ಭಾಗವಹಿಸಿದ್ದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಕೋಡಿಮಂಚೇನಹಳ್ಳಿ ನಾಗೇಶ್‌, ವಿಎಸ್‌ಎಸ್‌ಎನ್‌ ಅಧ್ಯಕ್ಷ ಆನಂದ್‌, ಎಂಪಿಸಿಎಸ್‌ ಅಧ್ಯಕ್ಷ ದಿನಕರ್‌, ಸಿ.ಆರ್‌.ಪಿ ಮತ್ತು ಬಿ.ಆರ್‌.ಪಿ ನೌಕರರ ಸಂಘ ಅಧ್ಯಕ್ಷ ವಿ.ಸಿ. ಜ್ಯೋತಿಕುಮಾರ್‌, ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕ ಉಪಾಧ್ಯಕ್ಷ ಗೋವಿಂದರಾಜು, ಮುಖ್ಯಶಿಕ್ಷಕ ಹನುಮಂತರಾಜು, ಮುಖಂಡರಾದ ಗೋಪಾಲ್‌, ಮಂಜಣ್ಣ, ಮಿಥುನ್‌, ರವಿಕುಮಾರ್‌, ನಂಜೇಗೌಡ, ರಾಜಣ್ಣ, ರಮೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !