ಶನಿವಾರ, ಜನವರಿ 28, 2023
24 °C
ಚೀನಾ ಎದುರು 0–3 ರಲ್ಲಿ ಸೋಲು

ವಿಶ್ವ ಟಿಟಿ: ಭಾರತದ ಸವಾಲು ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆಂಗ್ಡು, ಚೀನಾ: ಭಾರತ ಪುರುಷರ ತಂಡದವರು ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರು.

ಗುರುವಾರ ನಡೆದ ಪಂದ್ಯದಲ್ಲಿ ಪ್ರಬಲ ಚೀನಾ ತಂಡ 3–0 ರಲ್ಲಿ ಭಾರತ ತಂಡವನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಹರ್ಮೀತ್‌ ದೇಸಾಯಿ 2–11, 9–11, 5–11 ರಲ್ಲಿ ಫಾನ್‌ ಜೆನ್‌ಡಾಂಗ್‌ ಎದುರು ಸೋತರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಚೀನಾದ ಆಟಗಾರ ಕೇವಲ 15 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.

ಎರಡನೇ ಸಿಂಗಲ್ಸ್‌ನಲ್ಲಿ ಜಿ.ಸತ್ಯನ್‌ ಅವರು ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಮಾ ಲಾಂಗ್ ಎದುರು ಕಣಕ್ಕಿಳಿದರು. ಮೊದಲ ಗೇಮ್‌ನಲ್ಲಿ ಸತ್ಯನ್‌ ಪ್ರಬಲ ಪೈಪೋಟಿ ನೀಡಿ 12–14 ರಲ್ಲಿ ಸೋತರು. ಆದರೆ ಎರಡು ಮತ್ತು ಮೂರನೇ ಗೇಮ್‌ನಲ್ಲಿ ಅದ್ಭುತ ಲಯದಲ್ಲಿ ಆಡಿದ ಲಾಂಗ್‌ 11–5, 11–0 ರಲ್ಲಿ ಗೆದ್ದು ಚೀನಾಕ್ಕೆ 2–0 ಮುನ್ನಡೆ ತಂದಿತ್ತರು.

ಮೂರನೇ ಸಿಂಗಲ್ಸ್‌ನಲ್ಲಿ ವಾಂಗ್‌ ಚಕ್ವಿನ್‌ 11–4, 11–5, 11–6 ರಲ್ಲಿ ಮಾನುಷ್‌ ಶಾ ಅವರನ್ನು ಸೋಲಿಸಿದರು.

ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ. ಭಾರತ ಮಹಿಳಾ ತಂಡದವರು ಬುಧವಾರ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ತೈಪೆ ಎದುರು 0–3 ರಲ್ಲಿ ಸೋತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.