ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ವಿಜೇಂದರ್‌ಗೆ ಗಾಯ

Last Updated 25 ಮಾರ್ಚ್ 2019, 16:02 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಬಾಕ್ಸರ್‌ ವಿಜೇಂದರ್‌ ಸಿಂಗ್‌, ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಏಪ್ರಿಲ್‌ 12ರಂದು ಲಾಸ್‌ ಏಂಜಲಿಸ್‌ನಲ್ಲಿ ನಿಗದಿಯಾಗಿದ್ದ ಅವರ ವೃತ್ತಿಪರ ಬಾಕ್ಸಿಂಗ್‌ ಪಂದ್ಯವನ್ನು ಆಯೋಜಕರು ಮುಂದೂಡಿದ್ದಾರೆ.

33 ವರ್ಷದ ಭಾರತದ ಬಾಕ್ಸರ್‌, ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

‘ಶುಕ್ರವಾರ ನಡೆದ ಅಭ್ಯಾಸದ ವೇಳೆ ಎಡಗಣ್ಣಿನ ಕೆಳ ಭಾಗಕ್ಕೆ ಗಾಯವಾಗಿತ್ತು. ಇದಕ್ಕೆ ವೈದ್ಯರು ಎರಡು ಹೊಲಿಗೆ ಹಾಕಿದ್ದು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ’ ಎಂದು ವಿಜೇಂದರ್‌ ತಿಳಿಸಿದ್ದಾರೆ.

2015ರಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಅಡಿ ಇಟ್ಟಿದ್ದ ವಿಜೇಂದರ್‌ ಸತತ 10 ಪಂದ್ಯಗಳಲ್ಲಿ ಗೆದ್ದಿದ್ದರು. ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್‌ ಸೂಪರ್‌ ವೆಲ್ಟರ್‌ವೇಟ್‌ ಕಿರೀಟವನ್ನೂ ಮುಡಿಗೇರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT