ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಟ್‌ಲಿಫ್ಟಿಂಗ್: ಮೀರಾಬಾಯಿಗೆ ಚಿನ್ನ

Last Updated 20 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ದೋಹಾ : ಭಾರತದ ಸಾಯಿಕೋಮ್ ಮೀರಾಬಾಯಿ ಚಾನು ಅವರು ಇಲ್ಲಿ ನಡೆಯುತ್ತಿರುವ ಕತಾರ್ ಅಂತರರಾಷ್ಟ್ರೀಯ ಕಪ್ ವೇಟ್‌ಲಿಫ್ಟಿಂಗ್‌ ನಲ್ಲಿ ಚಿನ್ನದ ಪದಕ ಗೆದ್ದರು.

ಮಹಿಳೆಯರ 49 ಕೆ.ಜಿ.ವಿಭಾಗದಲ್ಲಿ ಅವರು 194 ಕೆ.ಜಿ. ಭಾರವನ್ನು ಎತ್ತುವ ಮೂಲಕ ಪ್ರಥಮ ಸ್ಥಾನ ಗಳಿಸಿದರು. 25 ವರ್ಷದ ಮೀರಾ, ಕ್ಲೀನ್‌ ಮತ್ತು ಜರ್ಕ್‌ ವಿಭಾಗದ ಮೊದಲ ಪ್ರಯತ್ನದಲ್ಲಿ 111 ಕೆ.ಜಿ., ಎರಡನೇಯದ್ದರಲ್ಲಿ 115 ಕೆ.ಜಿ. ಮತ್ತು ಅಂತಿಮ ಅವಕಾಶದಲ್ಲಿ 116 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನ ಎರಡನೇ ಅವಕಾಶದಲ್ಲಿ 83 ಕೆ.ಜಿ. ಎತ್ತಿದರು. ಆದರೆ ಮೂರನೇ ಅವಕಾಶದಲ್ಲಿ ಅವರು 87 ಕೆ.ಜಿ. ಭಾರ ಎತ್ತುವಲ್ಲಿ ಸಫಲರಾಗಲಿಲ್ಲ.

ಅವರ ವಿಭಾಗದಲ್ಲಿ ಫ್ರಾನ್ಸ್‌ನ ಅನೇಸ್ ಮೈಕೆಲ್ (172 ಕೆ.ಜಿ), ಮೆನನ್ ಲಾರೆಂಜ್ (165 ಕೆ.ಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಈ ವರ್ಷದ ಆರಂಭದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಒಟ್ಟು 201 ಕೆ.ಜಿ. ಭಾರ ಎತ್ತಿದ್ದರು. ಅದೇ ಸಾಧನೆಯನ್ನು ಅವರು ಇಲ್ಲಿ ಮರುಕಳಿಸುವ ನಿರೀಕ್ಷೆ ಇತ್ತು.

ಅಮೆರಿಕದಲ್ಲಿ 2017ರ ಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾನು ಚಿನ್ನದ ಪದಕ ಗೆದ್ದಿದ್ದರು. ಮಣಿಪುರದ ಮೀರಾಬಾಯಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸ್ವರ್ಧಿಸುವ ಛಲದಲ್ಲಿದ್ದಾರೆ. ಅದಕ್ಕಾಗಿ ಅವರು ನವೆಂಬರ್ 2018 ರಿಂದ ಏಪ್ರಿಲ್ 2020ರವರೆಗಿನ ಅವಧಿಯಲ್ಲಿ ಆರು ಪ್ರಮುಖ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಅವುಗಳಲ್ಲಿ ಅವರು ಮಾಡುವ ಸಾಧನೆಯ ಪಾಯಿಂಟ್ಸ್‌ಗಳೊಂದಿಗೆ ಒಲಿಂಪಿಕ್ಸ್‌ ಅವಕಾಶ ನಿರ್ಧಾರವಾಗಲಿದೆ.ಈ ಅವಧಿಯಲ್ಲಿ ಅವರು ಕನಿಷ್ಠ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಜಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT