ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವ ಬಾಕ್ಸಿಂಗ್: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದ ಸೋನಿಯಾ

Last Updated 17 ನವೆಂಬರ್ 2018, 16:55 IST
ಅಕ್ಷರ ಗಾತ್ರ

ನವದೆಹಲಿ: ಬಲಶಾಲಿ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಸೋನಿಯಾ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿ‍ಪ್‌ನ 57 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಇಲ್ಲಿನ ಇಂದಿರಾಗಾಂಧಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಶನಿವಾರದ ರೋಚಕ ಬೌಟ್‌ನಲ್ಲಿ 21 ವರ್ಷದ ಸೋನಿಯಾ ಮೊರೊಕ್ಕೊದ ದೋ ತೊಜಾನಿ ಅವರನ್ನು 5–0ಯಿಂದ ಮಣಿಸಿದರು.

ಹರಿಯಾಣದ ಭಿವಾನಿ ಜಿಲ್ಲೆಯ ನಿಮ್ರಿ ಗ್ರಾಮದ ರೈತನ ಮಗಳಾದ ಸೋನಿಯಾ ಆಕ್ರಮಣದ ಜೊತೆಗೆ ರಕ್ಷಣಾತ್ಮಕ ಆಟಕ್ಕೂ ಆದ್ಯತೆ ನೀಡಿದರು. ಉತ್ತರಿಸಲಾಗದ ಎದುರಾಳಿ ಸುಲಭವಾಗಿ ಸೋಲೊಪ್ಪಿಕೊಂಡರು. ಐದು ಸುತ್ತುಗಳಲ್ಲಿ ಸೋನಿಯಾ 29–28, 30–27, 30–27, 30–27, 30–27 ಪಾಯಿಂಟ್‌ಗಳನ್ನು ಕಲೆ ಹಾಕಿದರು.

2016ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸೋನಿಯಾ ಕಳೆದ ವರ್ಷ ನಡೆದ ಸರ್ಬಿಯಾ ಕಪ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದರು. ಈ ವರ್ಷ ನಡೆದಿದ್ದ ಅಹಮತ್‌ ಕಾಮರ್ಟ್‌ ಬಾಕ್ಸಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗಳಿಸಿದ್ದರು. ಮೊದಲ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಅವರು ಹಲವು ಬಾರಿ ಎದುರಾಳಿಯ ಮುಖದ ಎಡಭಾಗಕ್ಕೆ ಪಂಚ್‌ ನೀಡಿದರು. ನೇರ ಪಂಚ್‌ಗಳ ಮೂಲಕವೂ ಗಮನ ಸೆಳೆದರು.

ಮೊರೊಕ್ಕೊ ಬಾಕ್ಸರ್ ಪ್ರತಿದಾಳಿ ನಡೆಸಿದರೂ ಪಾಯಿಂಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಮುಂದಿನ ಹಂತದಲ್ಲಿ ಸೋನಿಯಾ ಅವರು ಬಲ್ಗೇರಿಯಾದ ಸ್ಟಾನಿಮಿರಾ ಪೆಟ್ರೋವ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT