ಶುಕ್ರವಾರ, ಜನವರಿ 17, 2020
27 °C

ಕುಸ್ತಿ: ಫೈನಲ್‌ಗೆ ಸುನೀಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ರೋಮ್‌ : ಉದಯೋನ್ಮುಖ ಪೈಲ್ವಾನ್ ಸುನೀಲ್‌ ಕುಮಾರ್‌, ಇಲ್ಲಿ ನಡೆಯುತ್ತಿರುವ ಮೊದಲ ರ‍್ಯಾಂಕಿಂಗ್‌ ಸಿರೀಸ್‌ ಕುಸ್ತಿ ಸ್ಪರ್ಧೆಯಲ್ಲಿ ಬುಧವಾರ ಚಿನ್ನದ ಪದಕದ ಸುತ್ತನ್ನು ತಲುಪಿದ್ದಾರೆ.

ಸೀನಿಯರ್‌ ಮಟ್ಟದ ಮೊದಲ ಯತ್ನದಲ್ಲೇ ಈ ಸಾಧನೆಯಿಂದ 20 ವರ್ಷದ ಸುನೀಲ್‌ ಗಮನ ಸೆಳೆದಿದ್ದಾರೆ.

87 ಕೆ.ಜಿ. ವಿಭಾಗದಲ್ಲಿ 2–1 ರಿಂದ ಅಮೆರಿಕದ ಪ್ಯಾಟ್ರಿಕ್‌ ಆ್ಯಂಟನಿ ಮಾರ್ಟಿನೆಜ್‌ ಅವರನ್ನು ಸೋಲಿಸಿ ಉತ್ತಮ ಆರಂಭ ಮಾಡಿದ ಸುನೀಲ್‌, ಸೆಮಿಫೈನಲ್‌ನಲ್ಲಿ ವೆನೆಜುವೆಲಾದ ಲೂಯಿಸ್‌ ಎಡುವರ್ಡೊ ಅವೆಂಡನೊ ರೊಜಾಸ್‌ ಅವರನ್ನು ಚಿತ್‌ ಮಾಡಿದರು. ಪ್ರಶಸ್ತಿ ಸುತ್ತಿನಲ್ಲಿ ಹಂಗರಿಯ ವಿಕ್ಟರ್‌ ಲೊರಿಂಜ್‌ ವಿರುದ್ಧ ಸೆಣಸಲಿದ್ದಾರೆ.

ಭಾರತದ ಪೈಲ್ವಾನರು ಇಲ್ಲಿ ಒಟ್ಟು ಆರು ಒಲಿಂಪಿಕ್‌ ಸ್ಪರ್ಧಾವಿಭಾಗಗಳಲ್ಲಿ ಕಣಕ್ಕಿಳಿದಿದ್ದಾರೆ.

ಭಾರತದ ಆಶು (67 ಕೆ.ಜಿ) ಮತ್ತು ಸಚಿನ್‌ ರಾಣಾ (60 ಕೆ.ಜಿ) ಕಂಚಿನ ಪದಕಕ್ಕಾಗಿ ಸೆಣಸಾಡಲಿದ್ದಾರೆ.

ರಾಣಾ ಕ್ವಾರ್ಟರ್‌ಫೈನಲ್‌ನಲ್ಲಿ 5–4 ರಿಂದ ಉಕ್ರೇನ್‌ನ ಇಗೊರ್‌ ಕುರೊಚ್ಕಿನ್‌ ಮೇಲೆ ಜಯಗಳಿಸಿದರು. ಆದರೆ ಸೆಮಿಫೈನಲ್‌ನಲ್ಲಿ ತಾಂತ್ರಿಕ ನೈಪುಣ್ಯದ ಆಧಾರದಲ್ಲಿ ಉಜ್ಬೇಕಿಸ್ತಾನದ ಇಸ್ಲೊಮ್‌ಜಾನ್‌ ಬಖ್ರಮೋವ್‌ ಎದುರು ಸೋಲನುಭವಿಸಬೇಕಾಯಿತು.

ಆದರೆ ನವೀನ್‌ (130 ಕೆ.ಜಿ) ಮತ್ತು ಹರದೀಪ್‌ ಸಿಂಗ್‌ (97 ಕೆ.ಜಿ) ತಮ್ಮ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಲು ವಿಫಲರಾದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು