ಶುಕ್ರವಾರ, ಮೇ 7, 2021
26 °C
ವಿಶ್ವ ಯೂತ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಜುಗ್ನೂಗೆ ಸೋಲು

ಪ್ರೀಕ್ವಾರ್ಟರ್‌ಫೈನಲ್‌ಗೆ ಅಂಕಿತ್, ಮನೀಷ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಏಷ್ಯನ್ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ, ಭಾರತದ ಅಂಕಿತ್ ನರ್ವಾಲ್‌ ಹಾಗೂ ಮನೀಷ್‌ ಅವರು ಪೋಲೆಂಡ್‌ನ ಕಿಯೆಲ್ಸೆಯಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

64 ಕೆಜಿ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿದ ಅಂಕಿತ್‌ 5–0ಯಿಂದ ಉಜ್ಬೆಕಿಸ್ತಾನದ ಅಖ್ಮದೊನ್‌ ಅಖ್ಮೆದೊವ್‌ ಅವರನ್ನು ಮಣಿಸಿದರು. 75 ಕೆಜಿ ವಿಭಾಗದ ಬೌಟ್‌ನಲ್ಲಿ ಮನೀಷ್‌ 4–1ರಿಂದ ಇಸ್ರೇಲ್‌ನ ಡೇನಿಯಲ್‌ ಇಲುಶೊನೊಕ್‌ ಅವರಿಗೆ ಸೋಲಿನ ಪಂಚ್‌ ನೀಡಿದರು.

ಮುಂದಿನ ಸುತ್ತಿನಲ್ಲಿ ಅಂಕಿತ್, ಪೋಲೆಂಡ್‌ನ ಒಲಿವರ್‌ ಜಮೊಸ್ಕಿ ಎದುರು ಸೆಣಸಲಿದ್ದಾರೆ. ಮನೀಷ್‌ ಅವರು ಜೋರ್ಡಾನ್‌ನ ಅಬ್ದುಲ್ಲಾ ಅಲಾರಾಗ್ ಎದುರು ಕಣಕ್ಕಿಳಿಯಲಿದ್ದಾರೆ.

ಸೂಪರ್ ಹೆವಿವೇಟ್‌ನ 91+ ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಜುಗ್ನೂ, ಮೊದಲ ಸುತ್ತಿನಲ್ಲೇ ಹಂಗರಿಯ ಲೆವೆಂಟೆ ಕಿಸ್ ಎದುರು ಸೋಲು ಅನುಭವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.