ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್ ಅರ್ಹತಾ ಸುತ್ತಿನಲ್ಲಿ ಸೋತ ಅಂಕಿತಾ ರೈನಾ

Last Updated 25 ಸೆಪ್ಟೆಂಬರ್ 2020, 15:19 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತದ ಅಂಕಿತಾ ರೈನಾ ಅವರು ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ‌ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 3–6, 2–6ರಿಂದ ಜಪಾನ್‌ನ ಕುರುಮಿ ನಾರಾ ಎದುರು ಸೋತರು. ಇದರೊಂದಿಗೆ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಭಾರತದ ಅಗ್ರಕ್ರಮಾಂಕದ ಸಿಂಗಲ್ಸ್‌ ಆಟಗಾರ್ತಿ ಅಂಕಿತಾ, ಒಂದು ತಾಸು 21 ನಿಮಿಷಗಳಲ್ಲಿ ನಾರಾ ಅವರಿಗೆ ಶರಣಾದರು.

‘ನಾನು ಕೆಟ್ಟದಾಗೇನೂ ಆಡಲಿಲ್ಲ. ಸರ್ವಿಸ್‌ ಗೇಮ್‌ನಲ್ಲಿ ಅವಕಾಶಗಳಿದ್ದವು. ಆದರೆ ನಾರಾ ಅವರ ಆಟ ಶ್ರೇಷ್ಠವಾಗಿತ್ತು. ವಾತಾವರಣವೂನನಗೆ ಪೂರಕವಾಗಿರಲಿಲ್ಲ‘ ಎಂದು ಪಂದ್ಯದ ಬಳಿಕ ಅಂಕಿತಾ ಹೇಳಿದರು.

ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದ ಭಾರತದ ಸುಮಿತ್‌ ನಗಾಲ್‌, ರಾಮಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಈಗಾಗಲೇ ಸೋತು ನಿರ್ಗಮಿಸಿದ್ದಾರೆ.

ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ಅವರು ತಮ್ಮ ಜೊತೆಗಾರರೊಂದಿಗೆ ಡಬಲ್ಸ್‌ ವಿಭಾಗದಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT