ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ನೇ ಬಾರಿ ನಡಾಲ್‌ಗೆ ಅಗ್ರಸ್ಥಾನ

ವರ್ಷಾಂತ್ಯದ ಎಟಿಪಿ ರ‍್ಯಾಂಕಿಂಗ್:
Last Updated 18 ನವೆಂಬರ್ 2019, 19:50 IST
ಅಕ್ಷರ ಗಾತ್ರ

ಪ್ಯಾರಿಸ್‌: ಸ್ಪೇನ್‌ನ ರಫೇಲ್‌ ನಡಾಲ್‌ ಸೋಮವಾರ ಪ್ರಕಟಿಸಲಾದ ಎಟಿಪಿ ವರ್ಷಾಂತ್ಯದ ರ್‍ಯಾಂಕಿಂಗ್‌ನಲ್ಲಿ ಆಗ್ರಸ್ಥಾನಕ್ಕೆ ಏರಿದ್ದಾರೆ. ಅವರು ಐದನೇ ಬಾರಿ ಅಗ್ರ ಕ್ರಮಾಂಕದೊಡನೆ ವರ್ಷ ಮುಗಿಸಿದ್ದಾರೆ.

ಲಂಡನ್‌ನಲ್ಲಿ ಕಳೆದ ವಾರ ನಡೆದ ಎಟಿಪಿ ಫೈನಲ್ಸ್‌ನಲ್ಲಿ ಅವರು ಗುಂಪು ಹಂತ ದಾಟಿರಲಿಲ್ಲ. ಆದರೆ ನೊವಾಕ್‌ ಡೊಕೊವಿಕ್‌ ಸೆಮಿಫೈನಲ್‌ ತಲುಪಲು ವಿಫಲರಾಗಿದ್ದರಿಂದ ನಡಾಲ್‌ 9,985 ಅಂಕಗಳೊಡನೆ ಅಗ್ರಸ್ಥಾನಕ್ಕೇರಲು ದಾರಿಯಾಯಿತು. ಅವರು ಗಳಿಸಿದ ಪಾಯಿಂಟ್ಸ್‌, ಸರ್ಬಿಯಾದ ಆಟಗಾರನಿಗಿಂತ 840 ಹೆಚ್ಚು.

ಡೊಕೊವಿಕ್‌ ಮತ್ತು ರೋಜರ್‌ ಫೆಡರರ್‌ ಕೂಡ ಐದು ಬಾರಿ ವರ್ಷವನ್ನು ಮೊದಲ ಕ್ರಮಾಂಕದಲ್ಲಿ ಮುಗಿಸಿದ್ದರು. ಈಗ ನಡಾಲ್‌ ಅವರ ದಾಖಲೆ ಸರಿಗಟ್ಟಿದಂತಾಗಿದೆ. ಅತ್ಯಧಿಕ ಆರು ಬಾರಿ ಅಗ್ರಸ್ಥಾನ ಪಡೆದ ಶ್ರೇಯ ಪೀಟ್‌ ಸಾಂಪ್ರಸ್‌ ಹೆಸರಿನಲ್ಲಿದೆ.

ಮೊದಲ ಎಂಟು ಸ್ಥಾನ ಪಡೆದ ಆಟಗಾರರು: 1. ನಡಾಲ್‌ (ಸ್ಪೇನ್‌) 2. ಡೊಕೊವಿಕ್‌ (ಸರ್ಬಿಯಾ) 3. ರೋಜರ್‌ ಫೆಡರರ್‌ (ಸ್ವಿಟ್ಜರ್ಲೆಂಡ್‌) 4. ಡೊಮಿನಿಕ್‌ ಥೀಮ್‌ (ಆಸ್ಟ್ರಿಯಾ) 5. ಡೇನಿಯಲ್‌ ಮೆಡ್ವೆಡೇವ್‌ (ರಷ್ಯಾ) 6. ಸ್ಟೆಫಾನೊಸ್‌ ಸಿಸಿಪಸ್‌ (ಗ್ರೀಸ್‌) 7. ಅಲೆಕ್ಜಾಂಡರ್‌ ಜ್ವರೇವ್‌ (ಜರ್ಮನಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT