ಬುಧವಾರ, ಅಕ್ಟೋಬರ್ 23, 2019
20 °C
ಎಟಿಪಿ ಕ್ರಮಾಂಕಪಟ್ಟಿ

ಟೆನಿಸ್‌ ಅಗ್ರಪಟ್ಟ: ಬಾರ್ಟಗೆ ಪ್ಲಿಸ್ಕೋವಾ ಪೈಪೋಟಿ

Published:
Updated:

ಪ್ಯಾರಿಸ್‌ (ಎಎಫ್‌ಪಿ): ಭಾನುವಾರ ಝೆಂಗ್‌ಝೌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕರೋಲಿನಾ ಪ್ಲಿಸ್ಕೋವಾ ಅವರು ಈಗ ಟೆನಿಸ್‌ ಮಹಿಳಾ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಶ್ಲೆ ಬಾರ್ಟಿ ಅವರಿಗಿಂತ ಕೇವಲ 86 ಪಾಯಿಂಟ್‌ಗಳಷ್ಟು ಹಿಂದೆಯಿದ್ದಾರೆ.

ಸೋಮವಾರ ಬಿಡುಗಡೆಯಾದ ಕ್ರಮಾಂಕಪಟ್ಟಿಯಲ್ಲಿ 6,501 ಪಾಯಿಂಟ್‌ಗಳೊಡನೆ ಬಾರ್ಟಿ ಅಗ್ರಪಟ್ಟದಲ್ಲಿ ಮುಂದುವರಿದಿದ್ದಾರೆ. 27 ವರ್ಷದ ಆಟಗಾರ್ತಿ ಪ್ಲಿಸ್ಕೋವಾ(ಝೆಕ್‌ ಗಣರಾಜ್ಯ)  6,415 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನದಲ್ಲಿದ್ದಾರೆ. ಭಾನುವಾರ ಝೆಂಗ್‌ಝೌ ಓಪನ್‌ ಫೈನಲ್‌ನಲ್ಲಿ ಪ್ಲಿಸ್ಕೋವಾ 6–3, 6–2 ರಿಂದ ಪೆಟ್ರಾ ಮಾರ್ಟಿಕ್‌ ವಿರುದ್ಧ ಜಯಗಳಿಸಿದ್ದರು.

ಉಳಿದಂತೆ ಅಗ್ರ 25 ಆಟಗಾರ್ತಿಯರ ರ್‍ಯಾಂಕಿಂಗ್‌ನಲ್ಲಿ ಬದಲಾವಣೆಯಾಗಿಲ್ಲ. ಎಲಿನಾ ಸ್ವಿಟೊಲಿನಾ, ನವೊಮಿ ಒಸಾಕಾ ಮತ್ತು ಬಿಯಾಂಕಾ ಆ್ಯಂಡ್ರೆಸ್ಕ್ಯು ಕ್ರಮವಾಗಿ ಮೂರರಿಂದ ಐದವರೆಗಿನ ಸ್ಥಾನ ಪಡೆದಿದ್ದಾರೆ. ಸಿಮೊನಾ ಹಲೆಪ್‌, ಪೆಟ್ರಾ ಕ್ವಿಟೋವಾ, ಕೀಕಿ ಬರ್ಟನ್ಸ್‌, ಸೆರೆನಾ ವಿಲಿಯಮ್ಸ್‌ ಮತ್ತು ಬೆಲಿಂಡಾ ಬೆನ್ಸಿಕ್‌ ಕ್ರಮವಾಗಿ ಆರರಿಂದ ಹತ್ತರವರೆಗಿನ ಸ್ಥಾನಗಳನ್ನು ಪಡೆದಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)