ಭಾನುವಾರ, ಡಿಸೆಂಬರ್ 15, 2019
26 °C

ಆಸ್ಟ್ರೇಲಿಯಾ ಓಪನ್‌ಗೆ ಬೆಂಗಳೂರಿನ ‘ಬಾಲ್‌ ಕಿಡ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಬಾಲ್‌ ಕಿಡ್ (ಚೆಂಡು ಸಂಗ್ರಹಿಸುವ ಮಕ್ಕಳು) ತಂಡ ದಲ್ಲಿ ಸ್ಥಾನ ಪಡೆದ ಭಾರತದ ಹತ್ತು ಮಕ್ಕಳ ಪಟ್ಟಿಯನ್ನು ಬೆಂಗಳೂರಿನ ಕಿಯಾ ಮೋಟರ್ಸ್ ಬಿಡುಗಡೆ ಮಾಡಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಟೆನಿಸ್ ಅಟಗಾರ ಮಹೇಶ್ ಭೂಪತಿ ಅವರು ತಂಡಕ್ಕೆ ಶುಭ ಕೋರಿದರು.

ಈಚೆಗೆ ಕಿಯಾ ಮೋಟರ್ಸ್‌ ಸಂಸ್ಥೆ ನಡೆಸಿ ಓಪನ್‌ ಟ್ರೈ–ಔಟ್‌ಗಳಲ್ಲಿ ಭಾರತದಾದ್ಯಂತ 1800ಕ್ಕೂ ಹೆಚ್ಚು ಟೆನಿಸ್‌ ಉತ್ಸಾಹಿಗಳು ಭಾಗವಹಿಸಿದ್ದರು.

ತಂಡ ಇಂತಿದೆ: ಸಾರ್ಥಕ್ ಗಾಂಧಿ, ಎಂ.ವರ್ಷಿತ್ ಕುಮಾರ್ ರೆಡ್ಡಿ, ನಮನ್ ಮೆಹ್ತಾ, ಅಂಕಿತ್ ಪಿಲ್ಲಾನಿಯಾ, ಅಕ್ಷಿತ್ ಚೌಧರಿ, ಸೋನಂ ದಿವಾನ್, ರಿಭವ್‍ ಒಝಾ, ಸ್ವಾತಿ ಮಲ್ಹೋತ್ರಾ, ಜೆನ್ನಿಕಾ ಜೈಸನ್ ಮತ್ತು ಅನನ್ಯ ಸಿಂಗ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು