ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ ಟಿಟಿ: ಭಾರತ ತಂಡಗಳ ಶುಭಾರಂಭ

Last Updated 17 ಜುಲೈ 2019, 19:02 IST
ಅಕ್ಷರ ಗಾತ್ರ

ಕಟಕ್‌: ಆತಿಥೇಯ ಭಾರತ, ಬುಧವಾರ ಆರಂಭವಾದ ಕಾಮನ್‌ ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಆರಂಭ ಮಾಡಿದೆ. ಮಹಿಳಾ ಮತ್ತು ಪುರುಷರ ತಂಡಗಳು ಸೂಪರ್‌ ಎಂಟರ ಹಂತ ಪ್ರವೇಶಿಸಿವೆ.

ಭಾರತ ತಂಡದವರು ಗ್ರೂಪ್‌ ಹಂತದಲ್ಲಿ ಕೇವಲ ಎರಡು ಗೇಮ್‌ಗಳ ನ್ನಷ್ಟೇ ಕಳೆದುಕೊಂಡಿದ್ದರು. ಒಂದು ಗೇಮ್‌ಅನ್ನು ಶರತ್‌ ಕಮಲ್‌, ಸಿಂಗಪುರದ ಝೆಯು ಕ್ಲಾರೆನ್ಸ್‌ ಚ್ಯೂ ವಿರುದ್ಧ, ಮತ್ತೊಂದನ್ನು ಐಹಿಕಾ ಮುಖರ್ಜಿ, ಚಾಮತ್ಸರಾ ಫರ್ನಾಂಡೊ ವಿರುದ್ಧ ಕಳೆದುಕೊಂಡಿದ್ದರು.

ಶರತ್‌ ಕಮಲ್‌, ಜಿ.ಸತ್ಯನ್‌ ಮತ್ತು ಹರ್ಮೀತ್ ದೇಸಾಯಿ ಒಳಗೊಂಡ ತಂಡ ‘ಬಿ’ ಗುಂಪಿನಲ್ಲಿ 3–0ಯಿಂದ ಸ್ಕಾಟ್ಲೆಂಡ್‌ ವಿರುದ್ಧ ಮತ್ತು ಅಷ್ಟೇ ಅಂತರದಿಂದ ಸಿಂಗಪುರ ಎದುರು ಜಯಗಳಿಸಿತು.

ಮಹಿಳೆಯರ ‘ಬಿ’ ಗುಂಪಿನಲ್ಲಿ ಮಣಿಕಾ ಬಾತ್ರಾ, ಐಹಿಕಾ ಮುಖರ್ಜಿ, ಅರ್ಚನಾ ಕಾಮತ್‌ ಇದ್ದ ತಂಡ, ಶ್ರೀಲಂಕಾ ವಿರುದ್ಧ 3–0ಯಿಂದ ಜಯಗಳಿಸಿತು.

ಮಹಿಳೆಯರ ವಿಭಾಗದ ‘ಸಿ’ ಗುಂಪಿನಲ್ಲಿ ಮಲೇಷ್ಯಾ 3–1 ರಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ‘ಡಿ’ ಗುಂಪಿನಲ್ಲಿ ನೈಜೀರಿಯಾ 3–0 ಯಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು.

ಯುಗಾಂಡಾ ಮತ್ತು ಗಯಾನಾ ತಂಡಗಳಿಗೆ ಭಾಗವಹಿಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿದ್ದು, ಸ್ಪರ್ಧಿಗಳು ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಜುಲೈ 19ರಿಂದ ಈ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT